ಮಕ್ಕಳೆದುರೇ ಪತ್ನಿಯ ಬರ್ಬರ ಕೊಲೆ

0
22

ಬೆಳಗಾವಿ: ಮಲಗಿದ್ದ ಪತ್ನಿಯ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಮಕ್ಕಳ ಕಣ್ಣೆದುರಿನಲ್ಲೇ ಅಮಾನುಷವಾಗಿ ಕೊಂದು ಹಾಕಿದ ಘಟನೆ ಬೈಲಹೊಂಗಲ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಹಣಬರ ಹಟ್ಟಿಯ ನಿವಾಸಿ ಯಲ್ಲಪ್ಪನಿಗೆ ಪತ್ನಿ ಫಕೀರವ್ವ ಕಾಕಿ(೩೬) ಶೀಲದ ಬಗ್ಗೆ ಶಂಕೆ ಇದ್ದು, ಇದೇ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಕುಡಿದು ಬಂದು ಗಲಾಟೆ ಮಾಡುವ ಪತಿಯ ಬಗ್ಗೆ ಫಕೀರವ್ವಳು ರೋಸಿ ಹೋಗಿದ್ದಳು. ಕಳೆದ ರಾತ್ರಿ ಕುಡಿದ ಮತ್ತಿನಲ್ಲಿಯೇ ಮನೆಗೆ ಬಂದ ಯಲ್ಲಪ್ಪನಿಗೆ ಮನೆಯಲ್ಲಿ ಪತ್ನಿ ಮಲಗಿದ್ದು ಕಂಡು ಅಸಹನೆಯಾಗಿದೆ. ತಾನು ತಂದಿದ್ದ ಕಬ್ಬಿಣದ ಸಲಾಕೆಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿ ನಂತರ ತಲೆಮರೆಸಿಕೊಂಡಿದ್ದಾನೆ.
ಮಕ್ಕಳ ಮುಂದೆಯೇ ಈ ಕೃತ್ಯ ನಡೆಸಿದ ಆರೋಪಿ ನಂತರ ಪೊಲೀಸರ ಭಯದಿಂದ ಪರಾರಿಯಾಗಿದ್ದಾನೆ. ನೇಸರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸಿಡಿಲು ಬಡಿದು ಓರ್ವ ಸಾವು, ಇಬ್ಬರು ಗಂಭೀರ
Next articleಬೆಳಗಾವಿ: ಜೂ. ೧೪ರಿಂದ ವಿವಿಧ ವಿಮಾನ ಹಾರಾಟ ರದ್ದು