ಮಂತ್ರಾಲಯ ಮಠಕ್ಕೆ 3.69 ಕೋಟಿ ಕಾಣಿಕೆ ಸಂಗ್ರಹ

0
15

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿನ ಹುಂಡಿಗೆ ಭಕ್ತರು ಕಳೆದ
32 ದಿನಗಳಿಂದ ಶ್ರೀಮಠಕ್ಕೆ ಆಗಮಿಸಿದ್ದ ಭಕ್ತರು ಹಾಕಿರುವ ಕಾಣಿಕೆಯ ಹಣ ಎಣಿಕೆ
ಕಾರ್ಯಕ್ರಮ ನಡೆಯಿತು. ಒಟ್ಟು 3.69 ಕೋಟಿ ಹಣ ಸಂಗ್ರಹಣೆಯಾಗಿದೆ.
ಸೋಮವಾರ ಬೆಳಿಗ್ಗೆಯಿಂದ ಹುಂಡಿಯ ಹಣ ಎಣಿಕೆ ಕಾರ್ಯ ನಡೆಸಲಾಗಿತ್ತು. ಒಟ್ಟು
3,61,21,649 ರೂಗಳ ಮೌಲ್ಯದ ನೋಟುಗಳು ಹಾಗೂ 8,13,540 ಮೌಲ್ಯದ ನಾಣ್ಯ ಸೇರಿ ಒಟ್ಟು
3,69,35,189 ರೂಗಳ ನಗದು, 76 ಗ್ರಾಂ ಚಿನ್ನ, 1ಕೆಜಿ 900 ಗ್ರಾಂಗಳಷ್ಟು
ಬೆಳ್ಳಿಯನ್ನು ಭಕ್ತರು ಶ್ರೀಗುರುರಾಯರಿಗೆ ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಸಮರ್ಪಣೆ
ಮಾಡಿದ್ದಾರೆ ಎಂದು ಶ್ರೀಮಠವು ಪ್ರಕಟಣೆಯಲ್ಲಿ ತಿಳಿಸಿದೆ.

Previous articleಸಂಯುಕ್ತ ಕರ್ನಾಟಕ ಪತ್ರಿಕೆಯ ಜಾಣರ ಗುರು ಸಂಚಿಕೆ ವಿತರಣೆ
Next articleಉಡುಪಿ: ನಾಲ್ಕು ತಾಲೂಕುಗಳ ಶಾಲೆಗಳಿಗೆ ಇಂದು ರಜೆ