ರಾಯಚೂರು:ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಮಗ ಸಂಸದ ಬಿ ವೈ ರಾಘವೇಂದ್ರ ಅವರು ಪುತ್ರನ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನವನ್ನು ಗುರುವಾರ ಬೆಳಿಗ್ಗೆ ಪಡೆದರು.
ಯಡಿಯೂರಪ್ಪ ಅವರೊಂದಿಗೆ ಬಿ.ವೈ ರಾಘವೇಂದ್ರ ಅವರ ಪತ್ನಿ ಮತ್ತು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನವ ವಧುವರರು ಸೇರಿದಂತೆ ಕುಟುಂಬ ಸದಸ್ಯರು ಶ್ರೀಗುರುರಾಯರ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಆರ್ಶೀವಾದ ಪಡೆದರು.


























