ಶಿವಮೊಗ್ಗ: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಮಂಜುನಾಥ್‌ರಾವ್ ಅವರ ಪಾರ್ಥಿವ ಶರೀರ ಶಿವಮೊಗ್ಗಕ್ಕೆ ಆಂಬುಲೆನ್ಸ್ ಮೂಲಕ ತಲುಪಿದೆ. ಮಂಜುನಾಥರಾವ್ ಮನೆ ಬಳಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಂಜುನಾಥರಾವ್ ಅಂತ್ಯಕ್ರಿಯೆಗೂ ಮುನ್ನ ಅಂತಿಮ ಮೆರವಣಿಗೆ ನಡೆಯಲಿದೆ. ಶಿವಮೊಗ್ಗದಲ್ಲಿ ಅರ್ಧ ದಿನ ವರ್ತಕರಿಂದ ಸ್ವಯಂಪ್ರೇರಿತ ಬಂದ್ ನಡೆಯುತ್ತಿದೆ.
ಶಾಸಕ ಎಸ್.ಎನ್, ಚನ್ನಬಸಪ್ಪರವರು ಮಂಜುನಾಥ್‌ರಾವ್‌ರವರ ಅಂತಿಮ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ತಯಾರಿಯನ್ನು ಗಮನಿಸುತ್ತಿದ್ದು, ಅಂತ್ಯಕ್ರಿಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆಯಿದೆ.
ಸಂಸದ ಬಿ.ವೈ. ರಾಘವೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆರ್‌ಎಸ್‌ಎಸ್ ಮುಖಂಡರು ಈಗಾಗಲೇ ಮಂಜುನಾಥರಾವ್ ಮನೆಗೆ ಆಗಮಿಸಿದ್ದಾರೆ. ಇನ್ನೂ ಅಂತ್ಯಕ್ರಿಯೆಗೂ ಮೊದಲು ರೋಟರಿ ಚಿತಾಗಾರದವರೆಗೂ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದ್ದು, ಐಬಿ ಸರ್ಕಲ್, ಕುವೆಂಪು ರಸ್ತೆ, ಜೈಲ್ ಸರ್ಕಲ್, ಗೋಪಿ ಸರ್ಕಲ್, ಬಿ.ಹೆಚ್. ರಸ್ತೆ ಮೂಲಕ ಮೆರವಣಿಗೆ ಸಾಗಲಿದೆ.