ಮಂಗಳೂರು: ಕಾಂಗ್ರೆಸ್ ಕಚೇರಿಯೊಳಗಡೆ ನಾಯಕರ ನಡುವೆ ಹೊಡೆದಾಟ

0
28

ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯೊಳಗಡೆ ನಾಯಕರ ನಡುವೆ ಹೊಡೆದಾಟ ನಡೆದಿದೆ‌

ನೂತನವಾಗಿ ಆಯ್ಕೆಯಾದ ಗ್ರಾ.ಪಂ ಸದಸ್ಯರು ಹಾಗೂ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ದ.ಕ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ತುಂಬೆ ಚಂದ್ರ ಪ್ರಕಾಶ್ ಶೆಟ್ಟಿ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಎಂಎಲ್ಸಿ ಐವನ್ ಡಿಸೋಜ, ಮಿಥುನ್ ರೈ, ಇನಾಯತ್ ಅಲಿ ಉಪಸ್ಥಿತರಿದ್ದ ಸಭೆಯಲ್ಲೇ ಮುಖಂಡರ ನಡುವೆ ಹೊಡೆದಾಟ ನಡೆದಿದೆ. ಹರೀಶ್ ಕುಮಾರ್ ಅವರು ಚಂದ್ರ ಪ್ರಕಾಶ್ ಶೆಟ್ಟಿಯವರಿಗೆ ಹಲ್ಲೆ ಮಾಡಿದ್ದು, ಆ ಬಳಿಕ ಇಬ್ಬರೂ ಮುಖಂಡರ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗಿದೆ

ಪರಿಣಾಮ ಕಾಂಗ್ರೆಸ್ ಕಚೇರಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಮೈಸೂರಿನಲ್ಲಿಯೂ ಕ್ರೀಡಾಂಗಣಕ್ಕೆ ಜಾಗ
Next articleಭಾರಿ ಮಳೆ ಸಾಧ್ಯತೆ: ಮೀನುಗಾರಿಕೆ ನಿಷೇಧ