ಮಂಗಳೂರನ್ನ ಮಣಿಪುರ ಮಾಡಬೇಡಿ

ಮಂಗಳೂರು: ಮಂಗಳೂರನ್ನ ಮಣಿಪುರ ಮಾಡಬೇಡಿ ಅಂತ ಹೇಳುತ್ತೇವೆ, ಇಡೀ ರಾಜ್ಯದಲ್ಲಿ ಶಾಂತಿ ನೆಲೆಸಿರೋವಾಗ ಕರಾವಳಿಯಲ್ಲಿ ಯಾಕೆ ಹೀಗಾಗ್ತಿದೆ ಅನ್ನೋದನ್ನ ನೋಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರುಂದಿಗೆ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರ ರಾಜೀನಾಮೆ ವಾಪಾಸ್‌ಗೆ ಮನವಿ ಮಾಡುತ್ತೆನೆ, ನಾನು ಸಭೆ ನಡೆಸಲು ಬಂದಿಲ್ಲ, ಪ್ರತೀ ಸಾರಿ ಬರೋ ಹಾಗೆ ಯಥಾ ಪ್ರಕಾರ ಬಂದಿದ್ದೇನೆ, ಕೆಲವು ನಡೆಯಬಾರದ ಘಟನೆ ನಡೆದಿದೆ, ಯಾರೂ ದೃತಿಗೆಡೋದು ಬೇಡ ಅಂತ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ, ಉಸ್ತುವಾರಿ ಮಾಡ್ತಾರೆ ಅನ್ನೋ ಊಹಾಪೋಹಗಳನ್ನ ಬಿಟ್ಟು ಬಿಡಿ, ಮುಖ್ಯಮಂತ್ರಿಗಳದ್ದು ಸೌಜನ್ಯದ ಭೇಟಿ, ಮಂಗಳೂರನ್ನ ಮಣಿಪುರ ಮಾಡಬೇಡಿ ಅಂತ ಹೇಳೋದಷ್ಡೇ, ಇಡೀ ರಾಜ್ಯದಲ್ಲಿ ಶಾಂತಿ ನೆಲೆಸಿರೋವಾಗ ಕರಾವಳಿಯಲ್ಲಿ ಯಾಕೆ ಹೀಗಾಗ್ತಿದೆ ಅನ್ನೋದನ್ನ ನೋಡಬೇಕಿದೆ, ಅಮಾಯಕರನ್ನ ಹೋಗಿ ಸಾಯಿಸೋಕೆ ಇದು ಉತ್ತರಪ್ರದೇಶ,‌ ಮಣಿಪುರ ಅಲ್ಲ, ಇದರ ಬಗ್ಗೆ ಕ್ರಮ ತೆಗೋಳಿ ಅಂದಾಗ ಅವರೇ ಸ್ವಲ್ಪ ಹದಗೆಟ್ಟಿದೆ ಸರಿ ಮಾಡ್ತೀವಿ ಅಂದಿದ್ದು, ಸದ್ಯ ನೀವು ಹೋಗಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಮಾತನಾಡಿ ಎಂದಿದ್ದಾರೆ, ನಾವು ನ್ಯಾಯದ ಪರ ಇದೀವಿ, ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡಬೇಡಿ, ಸಂವಿಧಾನ ಮತ್ತು ನ್ಯಾಯದ ಪರ ಇದೀವಿ, ಹಾಗಾಗಿ‌ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಲು ಬಂದಿದ್ದೇನೆ, ನಿಮ್ಮ ರಾಜೀನಾಮೆ ವಾಪಾಸ್ ತೆಗೋಳಿ, ಯಾರು ಸಹ ಉಗ್ರವಾಗಿ ಯೋಚನೆ ಮಾಡೋದು ಕೂಡ ಬೇಕಾಗಿಲ್ಲ, ಮಂಗಳೂರಿಗೆ ಕರ್ನಾಟಕದಲ್ಲಿ ಒಳ್ಳೆಯ ಹೆಸರಿದೆ, ಅದನ್ನ ಮಣಿಪುರ ಮಾಡೋದು ಬೇಡ, ನಾನು ಎಲ್ಲರಿಗೂ ಮಾತನಾಡಿಸ್ತೀನಿ, ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನೂ ಕಳೆದುಕೊಳ್ಳಲು ತಯಾರಿಲ್ಲ, ಯಾವುದೋ ಭಾವನಾತ್ಮಕವಾಗಿ ಮನಸ್ಸಿಗೆ ನೋವಾದಾಗ ರಾಜೀನಾಮೆ ಕೊಟ್ಟಿದ್ದಾರೆ, ಎಲ್ಲರಿಗೂ ರಾಜೀನಾಮೆ ವಾಪಸ್ ಪಡೆಯಲು ಮನವಿ ಮಾಡುತ್ತೇನೆ, ಸರ್ಕಾರ ಜೊತೆಗಿರುವಾಗ ನಾವು ಕೆಲಸ ಮಾಡಿಲ್ಲ ಅಂದ್ರೆ ರಾಜೀನಾಮೆ ಕೊಡಬೇಕು, ನಾವು ಸೈದ್ದಾಂತಿಕವಾಗಿ ಬಹಳ ದೃಢವಾಗಿ ಇದ್ದಂಥವರು, ನಮ್ಮ ಸಿದ್ಧಾಂತಕ್ಕೆ ದಕ್ಕೆಯಾದಾಗ ಯಾರೂ ಸಹ ಹಾಗೆ ಮಾಡಬಹುದು, ಇದರಲ್ಲಿ ಇರೋ ಪಾತ್ರಧಾರಿಗಳು ಮತ್ತು ಅವರ ಕುಟುಂಬದವರು ಪಾಪದವರು(ಅಮಾಯಕರು), ಸೂತ್ರಧಾರಿಗಳು ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ತಾ ಇದಾರೆ, ಸೂತ್ರಧಾರಿಗಳ ಕೈಗೊಂಬೆಯಾಗಿ ನಮ್ಮ‌ ಪಾತ್ರಧಾರಿಗಳು ಪ್ರಾಣ ಕಳೆದುಕೊಳ್ತಾ ಇದಾರೆ, ಸ್ವಲ್ಪ ದಿವಸದಲ್ಲಿ ಇದರ ಸೂತ್ರಧಾರಿಗಳು ಯಾರ್ಯಾರೆಂದು‌ ನಾವು ಹೇಳುತ್ತೇವೆ, ಪೊಲೀಸರು ಒಳ್ಳೆಯ ಅಧಿಕಾರಿಗಳು ಇದ್ದಾರೆ, ಕ್ರಮ ಜರುಗಿಸ್ತಾರೆ, ಕಾನೂನು ಸುವ್ಯವಸ್ಥೆ ವಿಫಲ ಆದಾಗ ಸಿಎಂ ಮತ್ತು ಗೃಹ ಸಚಿವರು ಕ್ರಮ ಜರುಗಿಸಬೇಕಾಗುತ್ತದೆ, ಇದೊಂಥರ ಸೂಕ್ಷ್ಮ ಪ್ರದೇಶ ಆದ ಕಾರಣ ಬಹಳ ಯೋಚನೆ ಮಾಡಿ ಹೆಜ್ಜೆ ಇಟ್ಟಿದ್ದಾರೆ, ಎಲ್ಲಾ ಸರಿಯಾಗುತ್ತೆ ಎಂದರು.