ಕೊಪ್ಪಳ: ಮುಡಾ ಹಗರಣ ರೂವಾರಿ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಎಂಎಲ್ಸಿ ಹೇಮಲತಾ ನಾಯಕ್, ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ರಾಘವೇಂದ್ರ ಪಾನಘಂಟಿ, ವಿ.ಎಂ. ಭೂಸನೂರಮಠ, ರಮೇಶ ಕವಲೂರು, ಪ್ರದೀಪ್ ಹಿಟ್ನಾಳ್, ಕರಿಯಪ್ಪ ಮೇಟಿ, ಗಣೇಶ ಹೊರತಟ್ನಾಳ್, ಸುನೀಲ್ ಹೆಸರೂರು, ವಾಣಿಶ್ರೀ ಮಠದ್, ಮಧುರಾ ಕರಣಂ, ನೀಲಕಂಠಯ್ಯ, ಶಿವಕುಮಾರ ಕುಕನೂರು, ರಮೇಶ ತುಪ್ಪದ್ ಇದ್ದರು.