ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ: ಅಧಿಕಾರಿಗಳಿಗೆ ಬಿ.ವೀರಪ್ಪ ಕಿವಿಮಾತು

0
27


ದಾವಣಗೆರೆ: ಮಂಗಳವಾರದಿಂದ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡಿರುವ ಉಪಲೋಕಾಯುಕ್ತ ಬಿ.ವೀರಪ್ಪ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಕ್ಯೂ೯ಟ್ ಹೌಸ್ ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಲೋಕಾಯುಕ್ತ ಬಿ.ವೀರಪ್ಪ, ಸಾರ್ವಜನಿಕರ ಸಮಸ್ಯೆಗಳನ್ನು ಆದಷ್ಟು ಬೇಗ ಮುಗಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಕುಂದುಕೊರತೆ ನಿವಾರಿಸಬೇಕು, ಭ್ರಷ್ಟಾಚಾರ ಉತ್ತುಂಗಕ್ಕೆ ತಲುಪಿದೆ. ಆಸ್ತಿಗೋಸ್ಕರ ಗಂಡನನ್ನು ಸಾಯಿಸುವುದು ಸಾಮಾನ್ಯವಾಗಿದೆ. ಜನರಲ್ಲಿ ಸಂಸ್ಕಾರ, ಸಂಸ್ಕೃತಿ ಮರೆಯಾಗಿದೆ. ಮರು ನಿರ್ಮಾಣ ಮಾಡುವ ಜೊತೆಗೆ ನಾವೆಲ್ಲರೂ ಸೇರಿ ಲೋಕಾಯುಕ್ತ ಸಂಸ್ಥೆ ಇದೆ ಎಂಬುದನ್ನು ಸಾಬೀತು ಮಾಡಬೇಕಾಗಿದೆ‌ ಎಂದರು.
ಈ ವೇಳೆ ಡಿ.ಸಿ.ಸುರೇಶ್ ಬಿ.ಇಟ್ನಾಳ್, ಎಸ್.ಪಿ.ಉಮಾಪ್ರಶಾಂತ್, ಲೋಕಾಯುಕ್ತ ಅಪರ ನಿಬಂಧಕರಾದ ರಾಜಶೇಖರ್, ಎನ್.ವಿ.ಅರವಿಂದ್, ಮಿಲನ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್.ಕೌಲಾಪೂರೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Previous articleಯುಪಿಎಸ್ ಸಿ: ಸಾಗರದ ವಿಕಾಸ್‌ಗೆ 288ನೇ ರ‍್ಯಾಂಕ್
Next articleಬ್ರಹ್ಮಣರಿಗೆ ಜನಿವಾರ ಜೀವನದ ಅಸ್ಥಿತ್ವ