ಭೂಮಿ ಕಂಪಿಸಿದ ಅನುಭವ: ಭಯಭೀತರಾದ ಜನತೆ

0
14

ಹುಮನಾಬಾದ(ಬೀದರ್): ಪಟ್ಟಣದಲ್ಲಿ ಸೋಮವಾರ ರಾತ್ರಿ ೭ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಭಯಭೀತರಾಗಿದ್ದಾರೆ.
ಪ್ರತಿ ಮನೆಗಳಲ್ಲೂ ಕೆಲ ಸೆಕೆಂಡ್‌ಗಳ ಕಾಲ ಭಾರೀ ಪ್ರಮಾಣದ ಕಂಪಿಸಿದ ಅನುಭವ ಆಗುತ್ತಿದ್ದಂತೆ ಎಲ್ಲರೂ ಮನೆಯನ್ನು ಬಿಟ್ಟು ಹೊರಗೆ ಓಡಿ ಬಂದಿದ್ದಾರೆ. ಬಳಿಕ ವಿವಿಧ ಬಡಾವಣೆ, ಊರಿಗಳಲ್ಲಿರುವ ತಮ್ಮ ಸಂಬಂಧಿಕರ ಜತೆಯಲ್ಲಿ ಮೊಬೈಲ್ ಕರೆ ಮಾಡಿ ನಮ್ಮಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ನಿಮ್ಮಲ್ಲೂ ಹೀಗೆ ಅನುಭವ ಆಗಿದೆಯಾ ಎಂದು ಕೇಳುತ್ತಿರುವುದು ಸಾಮಾನ್ಯವಾಗಿತ್ತು. ಆದರೇ ಭೂಮಿ ಕಂಪನ ಪ್ರಮಾಣ ರಿಕ್ಟರ್ ಮಾಪಕದಲ್ಲಿ ಎಷ್ಟು ದಾಖಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Previous articleಮಂಗನ ಕಾಯಿಲೆ ಓರ್ವ ವ್ಯಕ್ತಿ ಬಲಿ
Next articleಅಪಘಾತ: ಬಳ್ಳಾರಿಯ ಐವರು ಸಾವು