ವಿಜಯಪುರ : ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಭೀಮಾ ತೀರದ ಭಾಗಪ್ಪ ಹರಿಜನ ಹತ್ಯೆ ನಡೆದಿದ್ದು, ಮಾರಕಾಸ್ತ್ರಗಳಿಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮಾರಕಾಸ್ತ್ರಗಳಿಂದ ಮುಖಕ್ಕೆ, ದೇಹದ ವಿವಿಧೆಡೆ ಕೊಚ್ಚಿ, ಕೈ ಕತ್ತರಿಸಿದ ಕೊಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಭಾಗಪ್ಪ ಅವರ ಮೇಲೆ ಕೆಲ ದಿನಗಳ ಹಿಂದಷ್ಟೇ ಕೋರ್ಟ್ ಆವರಣದಲ್ಲಿಯೇ ಫೈರಿಂಗ್ ನಡೆದಿತ್ತು, ಆದರೆ ಅಂದು ಬದುಕುಳಿದಿದ್ದ ಭಾಗಪ್ಪ ಅವರ ಮೇಲೆ ಇಂದು ಮತ್ತೊಮ್ಮೆ ದಾಳಿ ನಡೆದಿದೆ. ಆದರೆ ಇಂದು ನಡೆದ ದಾಳಿಯಲ್ಲಿ ಭಾಗಪ್ಪ ಬದುಕುಳಿಯಲಿಲ್ಲ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸೇರಿದಂತೆ ಅನೇಕ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ಪ್ರಗತಿಯಲ್ಲಿದೆ.