ಆಲಮೇಲ: ಭೀಮಾತೀರದ ಹಂತಕ ಖ್ಯಾತನಾಗಿದ್ದ ಭಾಗಪ್ಪ ಹರಿಜನ ದಿ. ೧೧ರಂದು ಕೊಲೆಯಾಗಿದ್ದು ಇಂದು ಸ್ವಂತ ಊರಾದ ಬ್ಯಾಡಗಿಹಾಳದಲ್ಲಿ ಅಂತಿಮ ಸಂಸ್ಕಾರ ನೆರವೇರಿತು.
ದಿ. ೧೧ ರ ರಾತ್ರಿ ೯ರ ಸುಮಾರಿಗೆ ವಿಜಯಪುರದ ರೆಡಿಯೋ ಕೇಂದ್ರದ ಬಳಿ ಮದಿನಾ ನಗರದಲ್ಲಿ ವಾಕಿಂಗ್ ಮಾಡುವ ಸಮಯದಲ್ಲಿ ಭಾಗಪ್ಪ ಹರಿಜನನ ಹತ್ಯೆ ನಡೆದಿದ್ದು, ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಮಾರಕಾಸ್ತçಗಳಿಂದ ಮುಖಕ್ಕೆ ದೇಹದ ವಿವಿಧೆಡೆ ಕೊಚ್ಚಿ ಕೈ ಕತ್ತರಿಸಿ ಮರ್ಮಾಂಗವನ್ನು ಕೊಯ್ದು ಬೆತ್ತಲೆ ಮಾಡಿ ಕೊಲೆ ಮಾಡಿದ್ದರು. ನಂತರ ಶವವನ್ನು ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಶವಪರೀಕ್ಷೆ ಮಾಡಿಸಿ ಪೋಲೀಸ್ ಬಿಗಿ ಬಂದೋಬಸ್ತ್ ಲ್ಲಿ ಸ್ವ ಗ್ರಾಮ ಬ್ಯಾಡಗಿಹಾಳ ಗ್ರಾಮಕ್ಕೆ ಆಗಮಿಸಿದಾಗ ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟಿತ್ತು, ೪ಗಂಟೆಗೆ ಪೋಲೀಸರ ಬಿಗಿಬಂದೋಬಸ್ತನಲ್ಲಿ ಅಂತ್ಯಕ್ರಿಯೆ ಅವರ ಜಮೀನಿನಲ್ಲಿ ಬುಧವಾರ ಜರುಗಿತು. ಸುಮಾರು ೨ ರಿಂದ ೩ ಸಾವಿರ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.
ಹಿನ್ನೆಲೆ: ಲಕ್ಷೀ ಹಾಗೂ ಮರಗಮ್ಮ ದೇವಿಯ ದೈವ ಭಕ್ತನಾಗಿದ್ದ, ಇತ್ತಿಚೆಗೆ ವಾರದ ಹಿಂದೆ ಲಕ್ಷ್ಮೀದೇವಿಯ ಗುಡಿ ಕಟ್ಟಲಿಕ್ಕೆ ಸಾವಿರಾರು ಜನರಿಗೆ ಉಡಿ ತುಂಬುವ ಕಾರ್ಯ ನಿರ್ವಹಿಸಿದ್ದ. ದೇವಿಯು ನನ್ನ ಸ್ವಪ್ನದಲ್ಲಿ ಬಂದು ಒಂದು ವಾರದವರೆಗೆ ಎಚ್ಚರವಾಗಿರಿ ಎಂದು ತನ್ನ ಅಭಿಮಾನಿಗಳಿಗೆ ತಿಳಿಸಿದ್ದು, ಆತ ಯಾವುದೇ ಶಿಕ್ಷಣ ಕಲಿತಿಲ್ಲ, ಕಲಿ ಮತ್ತು ಕಲಿಸಿರಿ ಕೆಲವೊಂದು ದಿನ ರಾತ್ರಿ ಶಾಲೆ ಕಲಿತಿದ್ದು, ಮೃತರಿಗೆ ಇಬ್ಬರು ಪತ್ನಿಯರು ಇದ್ದು ಅವರು ಮೈತರಾಗಿದ್ದು, ಮೊದಲನೇ ಪತ್ನಿಗೆ ಇಬ್ಬರು ಪುತ್ರಿಯರು, ಎರಡನೇ ಪತ್ನಿಗೆ ಏಕೈಕ ಪುತ್ರ, ಐದು ಮಂದಿ ಸಹೋದರರು, ಅಪಾರವಾದ ಬಳಗ ಇದೆ.

























