ಭೀಮನ ಕೈ ಹಿಡಿದ ಸಿದ್ರಾಮಯ್ಯ

0
25

ಬೆಂಗಳೂರು: ವಿಜಯ್​​ ನಾಯಕತ್ವದ ಭೀಮ ಚಿತ್ರವು ಮುಖ್ಯವಾಗಿ ಯುವಜನತೆಯ ದೃಷ್ಠಿಯಿಂದ ಮಾಡಿರುವಂತಹದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನಟ ವಿಜಯ ಹಂಚಿಕೊಂಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ ವಿಜಯ್​​ ನಾಯಕತ್ವದ ಭೀಮ ಚಿತ್ರವು ಮುಖ್ಯವಾಗಿ ಯುವಜನತೆಯ ದೃಷ್ಠಿಯಿಂದ ಮಾಡಿರುವಂತಹದು. ಬಹಳಷ್ಟು ಯುವಕ, ಯುವತಿಯರು ಮಾದಕವಸ್ತು ಹಾವಳಿಗೆ ಬಲಿಯಾಗಿ, ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುವಂತಹ ಅನೇಕ ಸನ್ನಿವೇಶಗಳನ್ನು ನೋಡುತ್ತಿದ್ದೇವೆ. ಈ ಚಿತ್ರದ ಉದ್ದೇಶ, ಯುವ ಸಮೂಹ ಡ್ರಗ್ಸ್​​​ ಹಾವಳಿಯಿಂದ ದೂರವಿದ್ದು, ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆನ್ನುವಂಥದ್ದು. ಅದು ಸಫಲವಾದರೆ, ಸಿನಿಮಾ ಮಾಡಿದ್ದಕ್ಕೂ ಸಾರ್ಥಕ ಎಂದು ನನಗನಿಸುತ್ತದೆ. ದುನಿಯಾ ವಿಜಯ್​ ಅವರು ಇಂಥ ಒಂದು ಸಿನಿಮಾವನ್ನು ಮಾಡಿರುವಂಥದ್ದು ಬಹಳ ಒಳ್ಳೆಯ ವಿಚಾರ, ಸಮಾಜದ ದೃಷ್ಟಿಯಿಂದಲೂ ಮತ್ತು ಯುವ ಸಮೂಹದ ದೃಷ್ಟಿಯಿಂದಲೂ. ಇದು ಯಶಸ್ವಿಯಾಗ್ಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Previous articleರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವ ಕೇಂದ್ರ ಸರ್ಕಾರ
Next articleಮೋದಿ, ಷಾ ಕೈಗೊಂಬೆಯಾದ ರಾಜ್ಯಪಾಲರಿಂದ ಸಂವಿಧಾನ ಹತ್ಯೆ