ಭೀಕರ ರಸ್ತೆ ಅಪಘಾತ : ಮಹಿಳೆ ಸೇರಿದಂತೆ ನಾಲ್ವರ ದುರ್ಮರಣ, 14 ಜನರಿಗೆ ಗಂಭೀರ ಗಾಯ

0
8

ಬೀದರ್ : ಬೀದರ್- ಭಾಲ್ಕಿ ರಾಷ್ಟ್ರೀಯ ಹೆದ್ದಾರಿ 50ರ ಲ್ಲಿನ ಸೇವಾ ನಗರ ತಾಂಡಾ ಬಳಿ ಬುಧವಾರ ಬೆಳಗ್ಗಿನ ಜಾವ 4.30 ಗಂಟೆ ಸುಮಾರಿಗೆ ಅಶೋಕ್ ಲಿಲ್ಯಾನ್ಡ್ ಪಿಕಪ್ ವಾಹನ ಮತ್ತು ಇಲ್ಲಿಯ ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆಯ ಖಾಲಿ ಲಾರಿ ನಡುವಣ ಸಂಭವಿಸಿದ ಮುಖಾ ಮುಖಿ ಡಿಕ್ಕಿಯಿಂದಾಗಿ ಮೂವರು ಪುರುಷರು ಮತ್ತು ಓರ್ವ ಮಹಿಳೆ ಸೇರಿದಂತೆ ನಾಲ್ವರು ಸಾವಿಗಿಡಾಗಿದ್ದಲ್ಲದೆ 6 ಪುರುಷರು ಹಾಗೂ ಐವರು ಮಹಿಳೆಯರು, ಮೂವರು ಮಕ್ಕಳು ಸೇರಿದಂತೆ 14 ಜನರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಉದಗೀರ್ ನ ದಸ್ತಗೀರ್ ದೌಲಸಾಬ್ (36), ರಶೀದಾ ಬಿ, ಅಶೋಕ್ ಲಿಲ್ಯಾನ್ಡ್ ಪಿಕಪ್ ವಾಹನ ಚಾಲಕ ಹೈದರಾಬಾದ್ ನ ವಲಿ ಮತ್ತು ಉದಗಿರನ ಅಮಹಮ್ ಶೇಕ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.

Previous articleಶಾಸಕತ್ವ ಅನರ್ಹತೆಯ ತೂಗುಗತ್ತಿ ತಪ್ಪಿದ್ದಲ್ಲ
Next articleನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆ