ಭೀಕರ ಅಪಘಾತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ- ಮೂವರು ಸಾವು

0
19

ಹುಬ್ಬಳ್ಳಿ (ಅಣ್ಣಿಗೇರಿ): ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಗದಗ್ ಮಾರ್ಗ ಮಧ್ಯ ಬರುವ ಭದ್ರಾಪುರ ಬಸ್ ನಿಲ್ದಾಣದ ಮುಂಭಾಗ ಗದಗ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಕ್ವಾಲಿಸ್ ವಾಹನ ನಿಂತಿದ್ದ ಲಾರಿಯ ಹಿಂಬದಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮೂರು ಜನರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ. ಮೃತರ ಸಂಪೂರ್ಣ ಮಾಹಿತಿಯನ್ನು ಸ್ಥಳೀಯ ಪೊಲೀಸ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.ಘಟನೆ ಕುರಿತು ಅಣ್ಣಿಗೇರಿ ಆರಕ್ಷಕ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Previous articleಭಾರಿ ಮಳೆ: ಉಡುಪಿ, ದ.ಕ. ಶಾಲೆಗಳಿಗೆ ರಜೆ
Next articleಮನೆಗೆ ತಡೆಗೋಡೆ ಬಿದ್ದು ಬಾಲಕಿ ಮೃತ್ಯು: ಹಲವು ಮನೆಗಳು ಜಲಾವೃತ, ಸ್ಥಳಾಂತರ