ಭೀಕರ ಅಪಘಾತ: ಚಾಲಕನ ಎದೆ ಹೊಕ್ಕ ಕಬ್ಬಿಣದ ಪೈಪ್‌

0
21

ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಚಾಲಕನ ಎದೆಗೆ ಕಬ್ಬಿಣದ ಪೈಪ್ ಹೊಕ್ಕ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ದಾವಣಗೆರೆ ಕಡೆಗೆ ಹೊರಟಿದ್ದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ವಿಸ್ ರೋಡ್‌ನಲ್ಲಿ ಪಲ್ಟಿಯಾಗಿ ಬಿದ್ದಿದೆ. ಈ ಸಂದರ್ಭದಲ್ಲಿ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಪೈಪ್ ಚಾಲಕನ ಎದೆಗೆ ಹೊಕ್ಕಿದೆ. ಈ ವೇಳೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಅಗ್ನಿಶಾಮಕದಳದ ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಚಾಲಕನ ಎದೆಗೆ ಹೊಕ್ಕಿರುವ ಕಬ್ಬಿಣದ ಪೈಪ್ ಹೊರತೆಗೆಯಲು ಹರಸಾಹಸಪಟ್ಟರು. ಆದರೆ ಸಾಧ್ಯವಾಗದೆ, ಸ್ವಲ್ಪ ಪಮಾಣದಲ್ಲಿ ಕಬ್ಬಿಣದ ಪೈಪ್‌ನ್ನು ತುಂಡರಿಸಿ, ಎದೆಯಲ್ಲಿ ಸಿಕ್ಕಿರುವ ಕಬ್ಬಿಣದ ಪೈಪ್‌ನೊಂದಿಗೆ ಲಾರಿ ಚಾಲಕನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಚಾಲಕ ಶಿವಾನಂದ ಬಡಗಿ (27 ವರ್ಷ) ಎದೆಗೆ ಕಬ್ಬಿಣದ ಪೈಪ್ ಹೊಕ್ಕಿದ್ದರೂ ಎದೆಗುಂದದೆ ಆಸ್ಪತ್ರೆಗೆ ತೆರಳಿದ್ದಾನೆ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Previous articleಅಧಿಕಾರಿಯನ್ನು ಮೊದಲು ಬಂಧಿಸಬೇಕು
Next articleಸರ್ಕಾರಗಳು ಮದ್ಯಪಾನ ನಿಷೇಧ ಮಾಡಲಿ