ಕುಷ್ಟಗಿ: ಚಲಿಸುವ ಲಾರಿಗೆ ಸ್ಲೀಪರ್ ಕೋಚ್ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು 6 ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಕುಷ್ಟಗಿ-ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕುರಬನಾಳ ಸಮೀಪ ಈ ಘಟನೆ ಸಂಬವಿಸಿದೆ. ಬೆಂಗಳೂರಿನಿಂದ ಗೋವಕ್ಕೆ ಹೊರಟಿದ್ದ ಬಸ್ಸು, ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ. ಡಿಕ್ಕಿಯ ರಭಸಕ್ಕೆ ಬಸ್ಸಿನ ಎಡ ಭಾಗದ ಮುಂಭಾಗ ಭಾಗಶಃ
ನಜ್ಜು ಗುಜ್ಜಾಗಿದೆ. ಓರ್ವ ಮೃತಪಟ್ಟಿದ್ದು, ಮೃತ ದುರ್ದೈವಿಯನ್ನು ತಮಿಳುನಾಡು ಮೂಲದ ನಟೇಶನ್ ಎಂದು ಗುರುತಿಸಲಾಗಿದೆ, ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.