ಭಾರತ vs ಬಾಂಗ್ಲಾದೇಶ ಸರಣಿ ವೇಳಾಪಟ್ಟಿ ಪ್ರಕಟ

ನವದೆಹಲಿ: ಭಾರತದ ಹಿರಿಯ ಪುರುಷರ ಕ್ರಿಕೆಟ್ ತಂಡದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿಯನ್ನು ICC ಬಿಡುಗಡೆ ಮಾಡಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಆಗಸ್ಟ್ 2025 ರಲ್ಲಿ ನಡೆಯಲಿರುವ ಭಾರತದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ ಮೂರು ODIಗಳು ಮತ್ತು ಮೂರು T20Iಗಳು ಸೇರಿವೆ. ಆಗಸ್ಟ್ 17 ರಂದು ಮಿರ್ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗುವ ಏಕದಿನ ಸರಣಿಗೆ ಮುಂಚಿತವಾಗಿ ಭಾರತ ತಂಡ ಆಗಸ್ಟ್ 13 ರಂದು ಢಾಕಾಗೆ ಆಗಮಿಸಲಿದೆ. ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವು ಚಟ್ಟೋಗ್ರಾಮ್‌ನಲ್ಲಿ ನಡೆಯಲಿದ್ದು, ಆಗಸ್ಟ್ 26 ರಂದು ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯವನ್ನು ಸಹ ಇದು ಆಯೋಜಿಸಲಿದೆ. ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಿಗಾಗಿ ತಂಡವು ಮಿರ್ಪುರಕ್ಕೆ ಹಿಂತಿರುಗಲಿದೆ. ಆಗಸ್ಟ್ 17 ರಿಂದ ಪ್ರಾರಂಭವಾಗುವ ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳಿಗೆ ಬಾಂಗ್ಲಾದೇಶ ಭಾರತವನ್ನು ಸ್ವಾಗತಿಸಲಿದೆ.

ಭಾರತದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿ
ಏಕದಿನ ಸರಣಿ: ಮೊದಲ ಏಕದಿನ ಪಂದ್ಯ – ಆಗಸ್ಟ್ 17, ಮಿರ್ಪುರ್, 2ನೇ ಏಕದಿನ ಪಂದ್ಯ – ಆಗಸ್ಟ್ 20, ಮಿರ್ಪುರ್, 3ನೇ ಏಕದಿನ ಪಂದ್ಯ – ಆಗಸ್ಟ್ 23, ಚಟ್ಟೋಗ್ರಾಮ್

T20I ಸರಣಿ: 1ನೇ ಟಿ20ಐ – ಆಗಸ್ಟ್ 26, ಚಟ್ಟೋಗ್ರಾಮ್, 2ನೇ ಟಿ20ಐ – ಆಗಸ್ಟ್ 29, ಮಿರ್ಪುರ್, 3ನೇ ಟಿ20ಐ – ಆಗಸ್ಟ್ 31, ಮಿರ್ಪುರ್