ಭಾರತದ ಮೇಲೆ ದಾಳಿ ನಡೆಸಿದ ಪಾಕ್ ಸೇನಾ ಮುಖ್ಯಸ್ಥನಿಗೆ ಬಡ್ತಿ

ಇಸ್ಲಾಮಾಬಾದ್: ಭಾರತವನ್ನು ಕೆಣಕಿ ಯುದ್ಧಕ್ಕಿಳಿಯುವಂತೆ ಮಾಡಿದ ಪಾಕಿಸ್ತಾನ ಹೀನಾಯ ಪರಾಭವಗೊಂಡರೂ ಪಾಕಿಸ್ತಾನ ಸೇನಾಮುಖ್ಯಸ್ಥ ಅಸೀಮ್ ಮುನೀರ್‌ಗೆ ಆ ದೇಶದ ಸರ್ಕಾರ ಫೀಲ್ಡ್ ಮಾರ್ಷಲ್ ಎನ್ನುವ ಸೇನೆಯ ಮಹತ್ತರ ಪದವಿಯನ್ನಿತ್ತು ಗೌರವಿಸಿದೆ. ಸೇನಾಪಡೆಯಲ್ಲಿ ಅತ್ಯದ್ಭುತ ಕಾರ್ಯಾಚರಣೆ ನಡೆಸಿದ ಮಹತ್ತರ ಸಾಧನೆ ಮಾಡಿದ ಸೇನಾಧಿಕಾರಿಗಳಿಗೆ ಮಾತ್ರ ಅಪರೂಪವಾಗಿ ಇಂತಹ ಪದವಿ ನೀಡಲಾಗುತ್ತಿದೆ. ಆದರೆ ಕೋಮುಪ್ರಚೋದಕ ಭಾಷಣ ಮೂಲಕ ತನ್ನ ದೇಶದಲ್ಲಿರುವ ಭಯೋತ್ಪಾದಕರನ್ನು ಕೆರಳಿಸಿ ಪಹಲ್ಗಾಮ್‌ನಲ್ಲಿ ೨೬ ಪ್ರವಾಸಿಗರನ್ನು ಅಮಾನುಷವಾಗಿ ಕೊಲ್ಲಿಸುವ ಮೂಲಕ ಎರಡೂ ದೇಶಗಳ ಮಧ್ಯೆ ಸಂಘರ್ಷಕ್ಕೆ ನಾಂದಿ ಹಾಡಿದರೂ ಭಾರತದೆದುರು ಪಾಕಿಸ್ತಾನ ಸೇನೆ ಭಾರೀ ಮುಖಭಂಗ ಅನುಭವಿಸಿದೆ. ಆದಾಗ್ಯೂ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಸಂಪುಟ ಈ ಮಹತ್ತರ ಹುದ್ದೆಗೆ ಬಡ್ತಿ ನೀಡುವ ತೀರ್ಮಾನ ಕೈಗೊಂಡಿದೆ.