ಭರತನಿಗೆ ಜನರ ಬೆಂಬಲ ಚನ್ನಾಗಿದೆ

0
21

ಹಾವೇರಿ( ಶಿಗ್ಗಾವಿ): ಜನರ ಆಗ್ರಹದ ಮೇಲೆಯೇ ಪುತ್ರ ಭರತನನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಜನರ ಬೆಂಬಲ ಚೆನ್ನಾಗಿದೆ ಎಂದು ಚನ್ನಮ್ಮ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ಉಪಚುನಾವಣೆ ಹಿನ್ನಲೆಯಲ್ಲಿ ಅವರು ಭಾನುವಾರ ತಮ್ಮ ಪುತ್ರ ಭರತ ಬೊಮ್ಮಾಯಿ ಪರ ಶಿಗ್ಗಾವಿ ತಾಲೂಕಿನ ಹನುಮರಹಳ್ಳಿಯ ತಮ್ಮ ಪ್ರಭನಂಜನ್ ಗಾರ್ಮೆಂಟ್ ನಲ್ಲಿ ಮತಯಾಚನೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಕ್ಷೇತ್ರದಲ್ಲಿ ಮಹಿಳಾ ಮತದಾರರ ಬೆಂಬಲ ಚೆನ್ನಾಗಿದೆ. ಅವರು ಕ್ಷೇತ್ರದಲ್ಲಿ ರಸ್ತೆ, ಮನೆ, ಕುಡಿಯುವ ನೀರು ಎಲ್ಲವೂ ಆಗಿದೆ. ಉದ್ಯೋಗ ದೊರಕಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಭರತ್ ಬೊಮ್ಮಾಯಿ ಅವರ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು.
ಈ ಮುಂಚೆಯೇ ತಮ್ಮ ತಂದೆಯ ಪರವಾಗಿ ಚುನಾವಣೆಯಲ್ಲಿ ಪಾಲ್ಗೊಂಡಿರುವುದರಿಂದ ಕ್ಷೇತ್ರದ ಜನರು ಗೊತ್ತಿದ್ದಾರೆ. ಕ್ಷೇತ್ರದಲ್ಲಿ ಫ್ಯಾಕ್ಟರಿಗಳು ಬರಲು ಭರತನೇ ಕಾರಣ, ಅವರ ತಂದೆಯಂತೆ ಮಗ ಕ್ಷೇತ್ರದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಾನೆ. ಯುವಕರ ಪರವಾಗಿ ದುಡಿಯುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Previous articleವಿಪ್ರ ಸಮಾಜ ಗಾಯತ್ರಿ ಮಂತ್ರದ ಅನುಷ್ಟಾನದಲ್ಲಿ ಒಂದಾಗಬೇಕು
Next articleಕುಮಾರಸ್ವಾಮಿಯವರು ಹಿಂದೆ ಚುನಾವಣೆಯಲ್ಲಿ ಸೋತಾಗ ಅಭಿಮನ್ಯು ಆಗಿರಲಿಲ್ಲವೇ ?