ನವದೆಹಲಿ: ಭಯೋತ್ಪಾದನೆಯು ಜಾಗತಿಕ ಸಮಸ್ಯೆಯಾಗಿದ್ದು,ಅದರ ವಿರುದ್ಧದ ಭಾರತದ ಹೋರಾಟ ಸ್ಪಷ್ಟವಾಗಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ಸ್ಲೊವೇನಿಯಾದ ರಾಜಧಾನಿ ಲುಬ್ಜಿಯಾನಗೆ ಭೇಟಿ ನೀಡಿದ ಸರ್ವಪಕ್ಷಗಳ ನಿಯೋಗ ಸ್ಲೊವೇನಿಯಾದ ರಾಜಧಾನಿ ಲುಬ್ಜಿಯಾನಗೆ ಭೇಟಿ ನೀಡಿದ್ದಾರೆ, ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಮಿತ್ ನಾರಂಗ್ ಬರಮಾಡಿಕೊಂಡರು. ಭಯೋತ್ಪಾದನೆ ನಿರ್ಮೂಲನೆಗೆ ಬೆಂಬಲಿಸುವಂತೆ ರಷ್ಯಾವನ್ನು ನಾವು ಕೇಳಿಕೊಂಡಿದ್ದು, ಅದಕ್ಕೆ ರಷ್ಯಾ ಸಕರಾತ್ಮಕವಾಗಿ ಸ್ಪಂದಿಸಿದೆ ಎಂದಿದ್ದಾರೆ.























