ಮಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ಮುಖಂಡ ಉದಯ್ ಆಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಖಾಸಗಿ ಯು ಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಬಿಜೆಪಿ ಚುನಾವಣೆ ಬಂದ ಸಂದರ್ಬದಲ್ಲೆಲ್ಲಾ ಇಂತಹ ಕೃತ್ಯ ನಡೆಸುತ್ತದೆ, ಅದು ಭಯೋತ್ಪಾದಕ ದಾಳಿ, ಸೈನಿಕತ ಹತ್ಯೆ ಹೀಗೆ ಮುಂದುವರಿಯುತ್ತದೆ, ಇದರಿಂದ ಬಿಜೆಪಿಗೆ ಚುನಾವಣೆಯಲ್ಲಿ ಲಾಭ ಆಗುತ್ತೆ ಎಂದಿದ್ದಾರೆ.
ನಾನು ಈ ವಿಚಾರವನ್ನು ನೇರವಾಗಿ ಹೇಳುತ್ತೇನೆ , ಇದರ ಹಿಂದೆ ಬಿಜೆಪಿ ಪಕ್ಷದ ನೇರ ಕೈವಾಡ ಇದೆ. ಈ ಹಿಂದೆ ಬಿಜೆಪಿ ದೇಶದಲ್ಲಿ ಇದನ್ನೇ ಮಾಡಿಕೊಂಡು ಬಂದಿದೆ. ಉತ್ತರ ಪ್ರದೇಶದ ಚುನಾವಣೆ, ಕೇಂದ್ರ ಸರಕಾರ ಚುನಾವಣೆ ಸಂದರ್ಭದಲ್ಲೂ ಹಲವಾರು ಕಡೆ ಬಾಂಬ್ ದಾಳಿ ನಡೆಸುವುದು, ಸೈನಿಕರನ್ನು ಕೊಲ್ಲಿಸುವಂತ ಹಲವಾರು ಉದಾಹರಣೆಗಳು ಇವೆ. ಈಗ ಸದ್ಯ ಬಿಹಾರ ಚುನಾವಣೆ ಇದೆ. ಬಿಜೆಪಿಯವರು ಏನೋ ಪ್ಲ್ಯಾನ್ ಮಾಡಿದ್ದಾರೆ ಅದನ್ನು ಸಕ್ಸಸ್ ಮಾಡಿದ್ದಾರೆ. ಬಿಜೆಪಿಯವರ ಅಧಿಕಾರದ ಆಸೆಗಾಗಿ ಪಾಪದ ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ಮುಖಂಡನ ಹೇಳಿಕೆಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದೆ.