ಭದ್ರಾ ನದಿಯಲ್ಲಿ ಮುಳಗಿ ಯವಕ ಸಾವು

0
24

ಬಾಳೆಹೊನ್ನೂರು: ಭದ್ರಾ ನದಿಯಲ್ಲಿ ಈಜಲು ಹೋದ 25 ವರ್ಷದ ಯುವಕ ಸುಳಿಗೆ ಸಿಕ್ಕಿ ಪ್ರಾಣ ಕಳೆದುಕೊಂಡ ಘಟನೆ ಎನ್.ಆರ್.ಪುರ ತಾಲ್ಲೂಕಿನ ಗಡಿಗೇಶ್ವರದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಜಲಾಲ್(೨೫) ಎಂದು ಗುರುತಿಸಲಾಗಿದ್ದು, ಬಾಳೆಹೊನ್ನೂರಿನ ಭದ್ರಾ ನದಿಗೆ ಮೂವರು ಸ್ನೇಹಿತರು ಭಾನುವಾರ ಸಂಜೆ ಈಜಲು ತೆರಳಿದ್ದರು. ಈ ವೇಳೆ ಜಲಾಲ್ ನದಿಯ ಸುಳಿಗೆ ಸಿಲುಕಿದ್ದು, ಸ್ನೇಹಿತರು ಆತನನ್ನು ರಕ್ಷಿಸಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಶವಕ್ಕಾಗಿ ತೀವ್ರ ಶೋಧ ನಡೆಸಿದ್ದರೂ ಶವ ಪತ್ತೆಯಾಗದೆ ಹುಡುಕಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.
ಸೋಮವಾರ ಮುಳುಗು ತಜ್ಞರು ಮತ್ತು ಅಗ್ನಿಶಾಮಕದಳದಿಂದ ಶೋಧ ಕಾರ್ಯಾಚರಣೆ ಪುನರಾರಂಭಗೊಂಡಿದೆ. ಈ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleನೇಕಾರ ಆತ್ಮಹತ್ಯೆಗೆ ಮೈಕ್ರೋ, ಸಹಕಾರಿ ಸಂಘಗಳ ಸಾಲ ಕಾರಣ: ಕೊಣ್ಣೂರ
Next articleಯುವತಿ ವಿಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಬೆದರಿಕೆ