ಭದ್ರಾ ನದಿಗಿಳಿದ ಬಾಲಕಿ ನೀರುಪಾಲು

0
19

ಚಿಕ್ಕಮಗಳೂರು: ಭದ್ರಾನದಿ ನೀರಿನಲ್ಲಿ ಹನ್ನೇರೆಡು ವರ್ಷದ ಬಾಲಕಿ ಮುಳುಗಿ ಮೃತಪಟ್ಟಿ ರುವ ಘಟನೆ ನಡೆದಿದೆ.
ತಮಿಳುನಾಡಿನ ಹಸೂರಿನಿಂದ ಕುಟುಂಬವೊಂದು ಕಳಸ ಹೊರನಾಡು‌ ಪ್ರವಾಸಕ್ಕೆ ಬಂದಿದ್ದರು. ಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಜಾಹ್ನವಿ (12) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.
ಕಳಸ-ಹೊರನಾಡು ರಸ್ತೆ ಮಧ್ಯೆ ಸಿಗುವ ಭದ್ರಾ ನದಿಯ ಹೆಬ್ಬಾಳೆ ಯಲ್ಲಿ ಸ್ನಾನ ಮಾಡಿ ಅನ್ನಪೂ ರ್ಣೇಶ್ವರಿ ದೇವರ ದರ್ಶನ ಮಾಡಲು ಕುಟುಂಬದ ವರು ಮುಂದಾಗಿದ್ದು, ಕುಟುಂಬದ ವರೆಲ್ಲ ನೀರಿನಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ಜಾಹ್ನವಿ ನೀರಿನಲ್ಲಿ ಮುಳುಗಿದ್ದಾಳೆ. ತಕ್ಷಣ ಕುಟುಂಬದವರು ಜಾಹ್ನವಿಯನ್ನು ನೀರಿನಿಂದ ಮೇಲೆ ಎತ್ತಿದರೂ ಬಾಲಕಿ ತೀವ್ರ ಅಸ್ವಸ್ಥಳಾಗಿ ಮೃತಪಟ್ಟಿದ್ದಾಳೆ.

Previous articleಗಂಡ-ಹೆಂಡತಿ ಜಗಳ: ಮೊಸಳೆ ಬಾಯಿಗೆ ಆರು ವರ್ಷದ ಮಗು
Next articleಪ್ರಜ್ವಲ್ ಪ್ರಕರಣ ಗೊತ್ತಿದ್ದು ಮೈತ್ರಿ ಟಿಕೆಟ್ ಕೊಟ್ಟಿದ್ದಾರೆ