ಭದ್ರಾ ಅಭಯಾರಣ್ಯದಲ್ಲಿ ಕಾಡಾನೆ ಸಾವು

0
37

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯ ವ್ಯಾಪ್ತಿಯ ಹೆಬ್ಬೆಯ ವಲಯದಲ್ಲಿ ಸುಮಾರು 50 ವರ್ಷ ಪ್ರಾಯದ ಒಂಟಿ ದಂತ ಹೊಂದಿದ್ದ ಸಲಗ ಸಾವನ್ನಪ್ಪಿದೆ. ಆನೆಯು ಕಳೆದ ಮೂರು ದಿನಗಳ ಹಿಂದೆಯೇ ಮೃತಪಟ್ಟಿದ್ದು ತೇಗೂರು ಗುಡ್ಡ ಬೇಟೆ ನಿಗ್ರಹ ಪಡೆಯ ಸಿಬ್ಬಂದಿ ಅರಣ್ಯ ಗಸ್ತು ತಿರುಗುವಾಗ ಆನೆಯ ಕಳೆಬರಹ ಪತ್ತೆಯಾಗಿದೆ.
ಕಳೆದ ಎರಡು ವರ್ಷದಿಂದ ಆನೆಯ ಹಿಂಬದಿ ಎಡಗಾಲು ಡೊಂಕಾಗಿ ಕುಂಟುತ್ತ ಅರಣ್ಯದಲ್ಲಿ ಆಹಾರ ಅರಸುತ್ತಿತ್ತು ಎನ್ನಲಾಗಿದೆ. ಪ್ರಕಾಶ್ ನೇತೃತ್ವದ ಪಶು ವೈದ್ಯರ ತಂಡ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದೆ. ಈ ವೇಳೆ ಆನೆಯ ಹೊಟ್ಟೆಯಲ್ಲಿ ಯಾವುದೇ ಆಹಾರ ಕಂಡು ಬಂದಿಲ್ಲ. ಹೀಗಾಗಿ ಆನೆ ಸಹಜವಾಗಿ ಸಾವನ್ನಪ್ಪಿದೆ ಎನ್ನಲಾಗಿದೆ.
ಸ್ಥಳಕ್ಕೆ ಎಸಿಎಫ್ ಶಿವರಾತ್ರೇಶ್ವರ ಸ್ವಾಮಿ, ವಲಯ ಅರಣ್ಯಾಧಿಕಾರಿ ಗೌರವ್ ಇದ್ದರು. ಸರ್ಕಾರದ ಆದೇಶದ ಅನ್ವಯ ಆನೆಯ ದಂತವನ್ನು ತೆಗೆದು ಆನೆಯ ಕಳೇಬರಹ ಅಲ್ಲಿಯೇ ಬಿಡಲಾಗಿದೆ.

Previous articleಪೋಕ್ಸೋ ಪ್ರಕರಣದ ಆರೋಪಿಗೆ 7 ವರ್ಷ ಜೈಲು ಶಿಕ್ಷೆ
Next articleಒಳಮೀಸಲಾತಿ ಜಾರಿಯಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ