ಭಗವದ್ಗೀತೆ, ನಾಟ್ಯಶಾಸ್ತ್ರ ಯುನೆಸ್ಕೋದ ವಿಶ್ವ ಸ್ಮರಣೆ ದಾಖಲೆಯಲ್ಲಿ ಸೇರ್ಪಡೆ

0
27

ಭಾರತವು ಈಗ ಈ ಅಂತರರಾಷ್ಟ್ರೀಯ ನೋಂದಣಿಯಲ್ಲಿ 14 ನಮೂದುಗಳನ್ನು ಹೊಂದಿದೆ

ನವದೆಹಲಿ: ಪುರಾತನ ಭಾರತೀಯ ಗ್ರಂಥಗಳಾದ ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರವನ್ನು ಯುನೆಸ್ಕೋ ತನ್ನ ವಿಶ್ವ ಸ್ಮರಣೆ ನೋಂದಣಿ ಪಟ್ಟಿಯಲ್ಲಿ ಸೇರಿಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನರೇಂದ್ರ ಮೋದಿ ಅವರು ಇದು ಪ್ರಪಂಚದಾದ್ಯಂತದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಪಡುವ ಕ್ಷಣ” ಎಂದು ಹೇಳಿದ್ದಾರೆ. ಮುಂದುವರೆದು, “ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರವನ್ನು ಯುನೆಸ್ಕೋದ ವಿಶ್ವ ಸ್ಮರಣೆ ನೋಂದಣಿಯಲ್ಲಿ ಸೇರಿಸಿರುವುದು ನಮ್ಮ ಕಾಲಾತೀತ ಬುದ್ಧಿವಂತಿಕೆ ಮತ್ತು ಶ್ರೀಮಂತ ಸಂಸ್ಕೃತಿಗೆ ದೊರೆತ ಜಾಗತಿಕ ಮನ್ನಣೆಯಾಗಿದೆ. ಭಗವದ್ಗೀತೆ ಮತ್ತು ನಾಟ್ಯಶಾಸ್ತ್ರವು ಶತಮಾನಗಳಿಂದ ನಾಗರಿಕತೆಯ ಪ್ರಜ್ಞೆಯನ್ನು ಪೋಷಿಸಿವೆ. ಅದರ ಒಳನೋಟಗಳು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದಿದ್ದಾರೆ. ಇನ್ನು ವಿಶ್ವ ಮಹತ್ವ ಮತ್ತು ಅಸಾಧಾರಣ ಸಾರ್ವತ್ರಿಕ ಮೌಲ್ಯದ ಆಯ್ಕೆ ಮಾನದಂಡಗಳನ್ನು ಪೂರೈಸಲು ಅಂತರರಾಷ್ಟ್ರೀಯ ಸಲಹಾ ಸಮಿತಿಯಿಂದ ಶಿಫಾರಸು ಮಾಡಲ್ಪಟ್ಟ ಮತ್ತು ಕಾರ್ಯಕಾರಿ ಮಂಡಳಿಯಿಂದ ಅನುಮೋದಿಸಲ್ಪಟ್ಟ ಸಾಕ್ಷ್ಯಚಿತ್ರ ಪರಂಪರೆಯನ್ನು ಮೆಮೊರಿ ಆಫ್ ದಿ ವರ್ಲ್ಡ್ (MoW) ರಿಜಿಸ್ಟರ್ ಪಟ್ಟಿ ಮಾಡುತ್ತದೆ.

Previous articleಚಂದ್ರಶೇಖರ್ ಪ್ಯಾರಿಸ್ ಪ್ರಣಯಕ್ಕೆ 22ರ ಸಂಭ್ರಮ
Next articleಸಚಿವ ಖರ್ಗೆ ತವರು ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ ಆರೋಪ