ಕೊಪ್ಪಳ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಮತ್ತು ರಾಜ್ಯದ ಅಧ್ಯಕ್ಷರನ್ನು ಆಯ್ಕೆ ಮಾಡಲು ನಗರದ ಬ್ರಾಹ್ಮಣ ಸದಾಚಾರ ಸದನದಲ್ಲಿ ಭಾನುವಾರ ನಡೆದ ಮತದಾನ ವೇಳೆ ಕೊಂಚ ಗೊಂದಲ ಸೃಷ್ಟಿಯಾಯಿತು.
ಜಿಲ್ಲೆಯ ಪ್ರತಿನಿಧಿ ಸ್ಥಾನಕ್ಕೆ ಭಾನುಪ್ರಕಾಶ ಶರ್ಮಾ(ಅಶೋಕ ಹಾರನಹಳ್ಳಿಯವರ) ಬಣದಿಂದ ಗುರುರಾಜ ಜೋಶಿ ಹಾಗೂ ರಘುನಾಥ್ ಅವರ ಬಣದಿಂದ ಪ್ರಾಣೇಶ್ ಮಾದಿನೂರು ಕಣದಲ್ಲಿದ್ದು, ಎರಡು ಬಣದವರು ಮತ ನೀಡುವಂತೆ ವಿಪ್ರ ಬಾಂಧವರಲ್ಲಿ ಮನವಿ ಮಾಡುತ್ತಿದ್ದರು. ಮತದಾನ ಕೇಂದ್ರದ ಒಳಗಡೆ ಹೋಗಿ, ಮತಕ್ಕೆ ಮನವಿ ಮಾಡಿದ್ದಕ್ಕೆ ಎರಡು ಬಣಗಳ ನಡುವೆ ಗೊಂದಲ ಏರ್ಪಟ್ಟಿತ್ತು. ಬಳಿಕ ಪೊಲೀಸರು ಕೇಂದ್ರದ ಒಳಗಡೆ ಇದ್ದವರನ್ನು ಹೊರಗೆ ಕಳುಹಿಸಿ ವಾತಾವರಣ ತಿಳಿಗೊಳಿಸಿದರು.