ಬೆಂಗಳೂರು: ಬ್ಯಾಂಕ್ ದರೋಡೆ ಪ್ರಕರಣ ಇಷ್ಟು ತಡವಾಗಿ ಬೆಳಕಿಗೆ ಬಂದದ್ದು ಏಕೆ ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಿಂದೂ ಮುಖಂಡರ ಮಾಹಿತಿ ಸಂಗ್ರಹ, ಕೇಸು ದಾಖಲು ಮಾಡುವುದು, ಮನೆಗಳ ವಿಳಾಸ ಪತ್ತೆಹಚ್ಚುವಿಕೆ, ಹಳೆ ಕೇಸುಗಳಿಗೆ ಮರುಜೀವ ನೀಡುವುದರಲ್ಲೇ ತಲ್ಲೀನವಾಗಿರುವ ಪೊಲೀಸ್ ಇಲಾಖೆಗೆ ಇತ್ತ ಮೇ 23 ರಂದು ಆದ ಬ್ಯಾಂಕ್ ದರೋಡೆ ಇತ್ತೀಚೆಗಷ್ಟೇ ಬೆಳಕಿಗೆ ಬಂದಿರುವುದು ಗೃಹ ಇಲಾಖೆಯ, ಪೊಲೀಸ್ ವ್ಯವಸ್ಥೆಯ, ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಸಾಕ್ಷಿ.
ಇದು ನಾಚಿಕೆಗೇಡಿನ ಸಂಗತಿ. ಬ್ಯಾಂಕ್ನಲ್ಲಿರುವುದು ಸಾರ್ವಜನಿಕರ ಹಣ, ಅದನ್ನು ಲಪಟಾಯಿಸಿದ್ದವರ ಮೇಲೆ ಯಾವುದೇ ಮುಲಾಜಿಲ್ಲದೆ ಗುಂಡು ಹಾರಿಸಬೇಕು. ಹಾಗೆಯೇ, ಕನಿಷ್ಠ 8-10 ದಿನಗಳ ಹಿಂದೆ ಆದ ದರೋಡೆ ಪ್ರಕರಣ ಇಷ್ಟು ತಡವಾಗಿ ಬೆಳಕಿಗೆ ಬಂದದ್ದು ಏಕೆ ? ಎಂದು ರಾಜ್ಯದ ಜನತೆಗೆ ಗೃಹ ಮಂತ್ರಿಗಳಾದ ಡಾ ಜಿ.ಪರಮೇಶ್ವರ್ ಅವರು ಹಾಗೂ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಉತ್ತರಿಸಬೇಕು ಎಂದಿದ್ದಾರೆ,