ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು

0
12

ಕುಷ್ಟಗಿ: ಬೈಕ್‌ ಸ್ಕಿಡ್‌ ಆಗಿ ಬಿದ್ದು ಯುವಕ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಹನಮಸಾಗರ- ಹನಮನಾಳ ರಸ್ತೆಯಲ್ಲಿ ನಡೆದಿದೆ.
ತಾಲೂಕಿನ ಬಿಳೇಕಲ್ ಗ್ರಾಮದ ಶರಣಪ್ಪ ಬಸವಂತಪ್ಪ ಭಾವಿಮನಿ (೩೨) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಶರಣಪ್ಪ ಬಸವಂತಪ್ಪ ಭಾವಿಮನಿ ತನ್ನ ಪತ್ನಿಯ ಮೆಣಸಗೇರಿ ಗ್ರಾಮಕ್ಕೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹನಮಸಾಗರ-ಹನಮನಾಳ ರಸ್ತೆಯ ಮದ್ನಾಳ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಏಕಾಏಕಿಯಾಗಿ ಬೈಕ್‌ ಸ್ಕಿಡ್‌ ಆಗಿದ್ದು ಸ್ಥಳದಲ್ಲಿ ಸವಾರ ಸಾವನ್ನಪ್ಪಿದ್ದಾನೆ. ಮೃತಪಟ್ಟ ಶವವನ್ನು ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಘಟನೆ ಕುರಿತು ಹನಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮದುವೆಯಾಗದಕ್ಕೆ ಮನನೊಂದು ಆತ್ಮಹತ್ಯೆ
Next articleಪ್ರಜ್ವಲ್‌ಗೆ ದೇವೇಗೌಡರಿಂದ ಎಚ್ಚರಿಕೆ ಸಂದೇಶ