ಯಲ್ಲಾಪುರ ; ತಾಲೂಕಿನ ಮಂಚಿಕೇರಿಯ ಹಾಸಣಗಿ ಪಂಚಾಯತಿ ವ್ಯಾಪ್ತಿಯ ಮಾಳಕೊಪ್ಪ ಶಾಲೆಯ ಬಳಿ ರಭಸವಾಗಿ ಬಿಸಿದ ಗಾಳಿ ಮಳೆಗೆ ಮರವೊಂದು ಬೈಕ್ ಸವಾರನ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ಕಬ್ಬಿನಗದ್ದೆ ಯ 25ವರ್ಷದ ಯುವಕ ವಿನಯ ಮಂಜುನಾಥ ಗಾಡೀಗ ಮೃತಪಟ್ಟ ದುರ್ದೈ ವಿ ಯಾಗಿದ್ದಾನೆ.ಘಟನಾ ಸ್ಥಳಕ್ಕೆ ತಹಶೀಲ್ದಾರ ಅಶೋಕ ಭಟ್ಟ, ಪೊಲೀಸ್ ನಿರೀಕ್ಷಕರಾದ ರಮೇಶ ಹಾನಾಪುರ, ಪಿಎಸ್‌ಐ ಸಿದ್ದಪ್ಪ ಗುಡಿ, ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲಿಸಿದರು.
ವಿನಯ ಮಂಜುನಾಥ ಗಾಡೀಗನ ಮೃತ ದೇಹ ತಾಲೂಕ ಆಸ್ಪತ್ರೆ ಯಲ್ಲಿ ಇಡಲಾಗಿದ್ದು .ಶಿರಸಿ ಉಪವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಭೇಟಿ ನೀಡಿ ಮೃತನ ಸಂಬಂಧಿಕರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರವನ್ನು ತ್ವರಿತ ವಾಗಿ ಕೊಡಿಸುವದಕ್ಕೆ ಕ್ರಮ ಕೈಗೊಳ್ಳುವದಾಗಿ ಭರವಸೆಯನ್ನು ನೀಡಿದರು.