ಬೈಕ್‌ಗಳ ನಡುವೆ ಭೀಕರ ಅಪಘಾತ; ಬಸ್ ಹರಿದು ಸವಾರ ಸಾವು

0
22

ಮಂಗಳೂರು: ನಗರದ ಕುಲಶೇಖರ ಬಳಿ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ ವೇಳೆ ಬಸ್‌ ಹರಿದು
ಒಂದು ಬೈಕ್‌ನ ಸವಾರ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ. ಮೃತ ಸವಾರ ಚಂದನ್‌(20) ಎಂದು ಹೆಸರಿಸಲಾಗಿದೆ. ಕುಲಶೇಖರ ಶಾಲೆ ಬಳಿ ಬೆಳಗ್ಗೆ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಒಂದು ಬೈಕ್‌ನ ಸವಾರ ಚಂದನ್‌ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಇದೇ ವೇಳೆ ಆತನ ಮೇಲೆ ಸಂಚರಿಸುತ್ತಿದ್ದ ಬಸ್‌ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸಂಚಾರಿ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸಂವಿಧಾನದ ದುರುಪಯೋಗ ಮಾಡಿದ್ದು ಕಾಂಗ್ರೆಸ್
Next articleಕೇಂದ್ರ ಸಚಿವೆ ಬಿಜೆಪಿಯ ನಿರ್ಮಲಾ ಸೀತಾರಾಮನ್ ವಿರುದ್ಧ FIRಗೆ ಕೋರ್ಟ್ ಆದೇಶ