ಲೋಕ ಶಿಕ್ಷಣ ಟ್ರಸ್ಟ್‌ನ ‘ಸಂಯುಕ್ತ ಕರ್ನಾಟಕ’ವು ಕಲ್ಯಾಣ ಕರ್ನಾಟಕದ ಉದಯ, ಅಭ್ಯುದಯಕ್ಕೆ ವಿಶೇಷ ಆದ್ಯತೆ ಕೊಟ್ಟು ತನ್ನದೇ ಆದ ಕೊಡುಗೆ ನೀಡಿದೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಮುದ್ರಣ ಘಟಕ ಹಾಗೂ ಕಲಬುರಗಿ ಆವೃತ್ತಿ ಆರಂಭಗೊಂಡು ಈಗ 25 ವರ್ಷ. ರಜತ ಸಂಭ್ರಮ ಆಚರಿಸಲು ನಿರ್ಧರಿಸಿ ಇದೇ ಜೂನ್2025ರ 13 ಮತ್ತು 14 ರಂದು ಕಲಬುರಗಿಯ ಖಮೀತಕರ್ ಭವನದಲ್ಲಿ ‘ಕಲ್ಯಾಣ ಸಿರಿ’ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶುಕ್ರವಾರ ಆರಂಭವಾಗಲಿರುವ ‘ಕಲ್ಯಾಣ ಸಿರಿ’ ಕಾರ್ಯಕ್ರಮಕ್ಕೆ ಹೊಸ ಜೇವರ್ಗಿ ರಸ್ತೆಯ ಖಮಿತಕರ್ ಭವನ ಸಜ್ಜುಗೊಂಡಿದೆ.
ಜೂನ್ 13ರಂದು ಮುಂಜಾನೆ 11ಗಂಟೆಗೆ ʻಕಲ್ಯಾಣ ಸಿರಿʼ ಕಾರ್ಯಕ್ರಮವನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಎನ್.ಎಸ್. ಬೋಸರಾಜು, ರಹೀಂ ಖಾನ್, ಬಿ.ಆರ್. ಪಾಟೀಲ್, ಡಾ. ಅಜಯಸಿಂಗ್, ರಾಧಾಕೃಷ್ಣ ದೊಡ್ಡಮನಿ, ಬಿ.ಕುಮಾರ್ ನಾಯಕ, ಸಾಗರ ಖಂಡ್ರೆ ಆಗಮಿಸಲಿದ್ದಾರೆ.
ಮಾತೋಶ್ರೀ ಡಾ ದಾಕ್ಷಾಯಿಣಿ ಅಪ್ಪ ಸಾನ್ನಿಧ್ಯ ವಹಿಸಲಿದ್ದು, ಅಶೋಕ ಹಾರನಹಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಇದಕ್ಕೂ ಮುನ್ನ ಮುಂಜಾನೆ 10ಗಂಟೆಗೆ ಬಸವರಾಜ ಮತ್ತಿಮಡು, ಯು.ಬಿ. ವೆಂಕಟೇಶ, ಡಾ. ಭೀಮಾಶಂಕರ ಬಿಲಗುಂದಿ, ಕೇಶವ ದೇಸಾಯಿ ಅವರು ಮಳಿಗೆಗಳನ್ನು ಉದ್ಘಾಟಿಸಲಿದ್ದು, ಬಂಡೆಪ್ಪ ಕಾಶೆಂಪುರ, ಶಿವಕಾಂತ ಮಹಾಜನ್ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ 3ಗಂಟೆಯಿಂದ “371(ಜೆ) ಕಲಂ ಜಾರಿ: ಕಲ್ಯಾಣ ಕರ್ನಾಟಕದ ಅಭ್ಯದಯ ಏನು? ಎಂತು?” ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂವಾದದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ ಪಾಟೀಲ್, ಈಶ್ವರ ಖಂಡ್ರೆ, ಡಾ. ಶಿವಶಂಕರಪ್ಪ ಸಾಹು, ಶರಣಗೌಡ ಕಂದಕೂರ ಭಾಗವಹಿಸಲಿದ್ದು, ಡಿ.ಆರ್. ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5ಗಂಟೆಗೆ ಮನೋಹರ ಮಸ್ಕಿ ಅವರಿಂದ “ಕಲ್ಯಾಣ ಕರ್ನಾಟಕದಲ್ಲಿ ಸಹಕಾರಿ ಆಂದೋಲನ” ಕುರಿತು ಉಪನ್ಯಾಸ ಸಂವಾದ ನಡೆಯಲಿದೆ.
ಸಂಜೆ 6ರಿಂದ ಡಾ. ಸಂಗೀತಾ ಕಟ್ಟಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
ಜೂನ್ 14ರಂದು ಮುಂಜಾನೆ 11ರಿಂದ “ನಮ್ಮ ಮಕ್ಕಳು-ನಮ್ಮ ಭವಿಷ್ಯ” ಉಪನ್ಯಾಸ-ಸಂವಾದ ಕಾರ್ಯಕ್ರಮ ಡಾ. ಗುರುರಾಜ ಕರ್ಜಗಿ ಅವರು ನಡೆಸಲಿದ್ದು, ಹುಣಸವಾಡಿ ರಾಜನ್ ಅವರು ಸಂಯೋಜನೆ ಮಾಡಲಿದ್ದಾರೆ.
ಮಧ್ಯಾಹ್ನ 3ಗಂಟೆಗೆ “ಆರೋಗ್ಯ-ಆಹಾರ-ಚಿಂತನ” ಕುರಿತು ಡಾ. ವೆಂಕಟರಮಣ ಹೆಗಡೆ ಹಾಗೂ ಡಾ. ಅಪೂರ್ವ ಮುಕುಂದ ಅವರಿಂದ ಉಪನ್ಯಾಸ ನಡೆಯಲಿದೆ.
ಚಿಂತನ ನಡೆಯಲಿದೆ. ಕಲಬುರ್ಗಿಯ ಡಾ.ಆಪೂರ್ವ ಮುಕುಂದ ಭಾಗವಹಿಸಲಿದ್ದಾರೆ. ಇದಾದ ನಂತರ ಸಾಧಕ ರೈತರೊಂದಿಗೆ ಸಂವಾದ ನಡೆಯಲಿದ್ದು, ಕಲಬುರ್ಗಿಯ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನಡೆಸಿಕೊಡಲಿದ್ದಾರೆ.
ಸಂಜೆ 4 ಗಂಟೆಗೆ ‘ಕಲ್ಯಾಣ ಸಿರಿ’ಯ ಸಮಾರೋಪ ನಡೆಯಲಿದೆ. ಸಚಿವರಾದ ಎಚ್.ಕೆ. ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಾರಕೂಡ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು, ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ‘ಸಂಯುಕ್ತ ಕರ್ನಾಟಕ’ ಸಂಪಾದಕ ಮಹಾಬಲ ಸೀತಾಳಬಾವಿ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಿದ್ದಾರೆ.
ಸಂಜೆ 6ಗಂಟೆಗೆ ಗಂಗಾವತಿ ಬೀಚಿ ಪ್ರಾಣೇಶ್, ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಶಿ ತಂಡದಿಂದ ಹಾಸ್ಯ ಸಂಜೆ ನಡೆಯಲಿದೆ.