ಎರಡು ಸುತ್ತು ಗುಂಡಿನ ದಾಳಿಯಲ್ಲಿ ಕಾರಿನ ಗಾಜು ಸಿಡಿದು ತಲೆ ಮುಖದ ಭಾಗಕ್ಕೆ ಗಾಯ
ಬೆಳಗಾವಿ: ನಸುಕಿನ ಜಾವ ರಿಯಲ್ ಎಸ್ಟೇಟ್ ಉದ್ಯಮಿ ಪ್ರಫುಲ್ ಬಾಲಕೃಷ್ಣ ಪಾಟೀಲ(30) ಅವರ ಮೇಲೆ ಗುಂಡಿನ ದಾಳಿ ನಡೆದಿದೆ.
ನಗರದ ಗಣೇಶಪುರ ರಸ್ತೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಪ್ರಪುಲ್ ಬಾಲಕೃಷ್ಣ ಪಾಟೀಲ ಅವರು ಬೆಳಗುಂದಿಯಿಂದ ಮನೆಗೆ ಹೊರಟಿದ್ದಾಗ ಅಪರಿಚಿತರಿಂದ ಗುಂಡಿನ ದಾಳಿ ಮಾಡಿದ್ದಾರೆ, ಪ್ರಫುಲ್ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ದಾಳಿಗೆ ಒಳಗಾದ ಪ್ರಫುಲ್ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.