ಬೆಳಗಾವಿ ಮೃಗಾಲಯದಲ್ಲಿ ಸಿಂಹಿಣಿ ಸಾವು

0
22

ಬೆಳಗಾವಿ: ಬೆಳಗಾವಿಯ ಭೂತರಾಮನಹಟ್ಟಿ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿದ್ದ ಸಿಂಹಿಣಿ ನಿರುಪಮಾ ಗುರುವಾರ ಮಧ್ಯಾಹ್ನ ೧೨:೫೫ಕ್ಕೆ ಮೃತಪಟ್ಟಿದೆ.
ವೃದ್ಧಾಪ್ಯ ಹಾಗೂ ಬಹು ಅಂಗಾಂಗಗಳ ವೈಫಲ್ಯದಿಂದ ಈ ಸಿಂಹಿಣಿ ಅಸುನೀಗಿದೆ. ೧೫ ವರ್ಷ ಪ್ರಾಯದ ನಿರುಪಮಾಗೆ ಕಳೆದ ೧೫ ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದೆ.
ಸಾವಿನ ನಂತರ ಕೇಂದ್ರೀಯ ಮೃಗಾಲಯ ಪ್ರಾಧಿಕಾರವು ನಿಗದಿಪಡಿಸಿದ ಮಾರ್ಗಸೂಚಿಗಳಂತೆ ಮರಣೋತ್ತರ ಪರೀಕ್ಷೆ ಮಾಡಿ ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.

Previous articleಪೊಲೀಸ್ ಹುದ್ದೆ ನೇಮಕಾತಿ: ಐವರಿಗೆ 31 ಲಕ್ಷ ರೂ.ವಂಚನೆ
Next articleಮನೆ ದರೋಡೆಕೋರರನ್ನು ತಳಿಸಿದ ಗ್ರಾಮಸ್ಥರು