ಬೆಳಗಾವಿ ಬಿಮ್ಸ್ ನಲ್ಲಿ ಮತ್ತೋರ್ವ ಬಾಣಂತಿ ಸಾವು

0
15

ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ.
ಮೃತರನ್ನು
ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ನಿವಾಸಿ ಗಂಗವ್ವಾ ಗೊಡಕುಂದ್ರಿ (31) ಎಂದು ಗುರುತಿಸಲಾಗಿದೆ. ಗಂಗವ್ವಾರಿಗೆ ಜನವರಿ 31 ರಂದು 12 ಗಂಟೆ ಸುಮಾರು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಸಿಸೇರಿಯನ್ ಬಳಿಕ ಬಾಣಂತಿ ಗಂಗವ್ವಾ ಆರೋಗ್ಯವಾಗಿದ್ದರು. ಆದರೆ ಮಧ್ಯಾಹ್ನದ ವೇಳೆಯಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ನಂತರ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

Previous article‘ವಿದ್ಯಾಪತಿ’ಗೆ ಸಿಕ್ಕರು ಖಡಕ್ ವಿಲನ್…
Next articleಸರ್ಕಾರದಿಂದ ಪೊಲೀಸರಿಗೆ ಹೆಚ್ಚಿನ ಸವಲತ್ತು