ಬೆಳಗಾವಿ ಪಾಲಿಕೆ: ೭ ಲಕ್ಷ ಉಳಿತಾಯ ಬಜೆಟ್

0
9

ಬೆಳಗಾವಿ: ವಿರೋಧ ಪಕ್ಷದವರ ವಿರೋಧದ ನಡುವೆಯೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ೨೦೨೪-೨೫ ನೇ ಸಾಲಿನಲ್ಲಿ ೭ ಲಕ್ಷ ೭೨ ಸಾವಿರ ಉಳಿತಾಯ ಬಜೆಟ್‌ನ್ನು ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ವಿಜಾಪುರೆ ಅವರು ಈ ಉಳಿತಾಯ ಬಜೆಟ್‌ನ್ನು ಮಂಡಿಸಿದರು,
ಬಜೆಟ್‌ಗೆ ಮೇಯರ್ ಸವಿತಾ ಕಾಂಬಳೆ ಅವರು ಅನುಮೋದನೆ ಕೊಟ್ಟ ನಂತರ ಕೆಲಕಾಲ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ಮುಜಮಿಲ್ ಡೋಣಿ, ರೇಷ್ಮಾ ಬೈರಕದಾರ್ ಮುಂತಾದವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಕೇವಲ ಆಡಳಿತ ಪಕ್ಷದವರ ಬಜೆಟ್ ಆಗಿದೆ. ಬೆಳಗಾವಿಗರ ಬಜೆಟ್ ಆಗಿಲ್ಲ. ಆದ್ದರಿಂದ ಇದಕ್ಕೆ ತಕ್ಷಣ ಅನುಮೋದನೆ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಆಡಳಿತ ಪಕ್ಷದ ಹನುಮಂತ ಕೊಂಗಾಲಿ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ ಅವರು ಬಜೆಟ್ ಸಮರ್ಥನೆ ಮಾಡಿದರು. ಕೊನೆಗೆ ಬಜೆಟ್‌ಗೆ ಮೇಯರ್ ಅನುಮೋದನೆ ನೀಡಿದರು.

Previous articleಖರ್ಗೆ ಹೇಳಿಕೆ ಅರ್ಥಹೀನ
Next articleಸೋಮಶೇಖರ್ ರಾಜಕೀಯವಾಗಿ ಸೂಸೈಡ್ ಮಾಡಿಕೊಂಡಿದ್ದಾರೆ