ಬೆಳಗಾವಿ: ಗುತ್ತಿಗೆದಾರ ಅಷ್ಟೇ ಅಲ್ಲ ಲೇವಾದೇವಿ ವ್ಯವಹಾರದಲ್ಲಿ ತೊಡಗಿದ್ದ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಸೇರಿದಂತೆ ಮೂವರನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಸಂತೋಷನ ಪತ್ನಿ ಉಮಾ ಪದ್ಮಣ್ಣವರ, ಈಕೆಯ ಫೆಸ್‌ಬುಕ್ ಸ್ನೇಹಿತ ಮಂಗಳೂರು ಮೂಲದ ಶೋಭಿತಗೌಡ ಮತ್ತು ಪವನ ಎಂಬುವರೇ ಬಂಧಿತರು,
ಅ. ೯ರಂದು ಸಂತೋಷ ಪದ್ಮಣ್ಣವರ ಕೊಲೆಯಾಗಿತ್ತು, ಆದರೆ ಆಗ ಪತ್ನಿ ಉಮಾ ಹೃದಯಾಘಾತ ಎಂದು ಸಂಬಂಧಿಕರಿಗೆ ಹೇಳಿ ಅಂತ್ಯಸಂಸ್ಕಾರ ಮಾಡಿದ್ದರು, ಆದರೆ ಪುತ್ರಿ ಸಂಜನಾ ಬಂದ ನಂತರ ಸಿಸಿಟಿವಿ ದೃಶ್ಯ ಗಮನಿಸಲು ಹೋಗಿದ್ದ ಸಂದರ್ಭದಲ್ಲಿ ಇದು ಆಕಸ್ಮಿಕ ಅಲ್ಲ ಎನ್ನುವುದು ಸ್ಪಷ್ಟವಾಗಿತ್ತು, ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮಾಳಮಾರುತಿ ಸಿಪಿಐ ಉಮಾ ಪದ್ಮಣ್ಣವರ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.