ಬೆಳಗಾವಿಯಿಂದ ಬೆಂಗಳೂರಿಗೆ ಹೊಸ ವಂದೇ ಭಾರತ ಎಕ್ಸಪ್ರೆಸ್

0
38

ಬೆಂಗಳೂರು: ಬೆಳಗಾವಿ-ಬೆಂಗಳೂರು ನಡುವೆ ಬೆಳಗಾವಿ ನಗರದಿಂದ ಹೊಸ ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚಾರಕ್ಕೆ ಅಗತ್ಯ ಅನುಮೋದನೆ ದೊರೆತಿದೆ ಎಂದು ಮಾಜಿ‌ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ‌ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಬೆಂಗಳೂರು ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ “ವಂದೇ ಭಾರತ ಎಕ್ಸಪ್ರೆಸ್ ರೈಲು” ಸೇವೆಯನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕುರಿತಾದ ನಮ್ಮ ಬೇಡಿಕೆಯ ಬದಲು, ಬೆಳಗಾವಿಯಿಂದ ಬೆಂಗಳೂರು ವರೆಗೆ ಹೊಸದೊಂದು ವಂದೇ ಭಾರತ ಎಕ್ಸಪ್ರೆಸ್ ರೈಲು ಚಲಿಸಲಾಗುವ ಕುರಿತು ಅಗತ್ಯ ಅನುಮೋದನೆ / ಆದೇಶ ನೀಡಿರುವ ಬಗ್ಗೆ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿರುವುದು ಅತ್ಯಂತ ಸಂತಸದ ಸಂಗತಿ.

ಬೆಂಗಳೂರು- ಧಾರವಾಡ ನಡುವೆ ಸದ್ಯ ಸಂಚರಿಸುತ್ತಿರುವ ವಂದೇ ಭಾರತ ಎಕ್ಸಪ್ರೆಸ್ ರೈಲು ಸೇವೆಯನ್ನು ಬೆಳಗಾವಿ ನಗರದ ವರೆಗೆ ವಿಸ್ತರಿಸುವ ಕುರಿತು ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಇವರೊಂದಿಗೆ ಹಲವು ಬಾರಿ ಸಭೆಯನ್ನು / ಚರ್ಚೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಇವರ ಉಪಸ್ಥಿತಿಯಲ್ಲಿ ನಡೆದಿದ್ದು ಮತ್ತು ಒತ್ತಾಯಿಸಿದ್ದು ಇಲ್ಲಿ ಸ್ಮರಣೀಯ.

ಆದರೆ ಪ್ರಸ್ತಾಪಿತ ವಿಷಯವಾಗಿ ಬೆಳಗಾವಿ-ಬೆಂಗಳೂರು ನಡುವೆ ಬೆಳಗಾವಿ ನಗರದಿಂದ ಹೊಸ ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚಾರವನ್ನು ಬೆಳಿಗ್ಗೆ ಪ್ರಾರಂಭಿಸಿ ಬೆಂಗಳೂರು ತಲುಪಿ, ತದನಂತರ ಮಧ್ಯಾಹ್ನ ಬೆಂಗಳೂರಿನಿಂದ ಹೊರಟು ರಾತ್ರಿ ಬೆಳಗಾವಿ ತಲುಪುವ ಬಗ್ಗೆ ವಿಷಯ ತಿಳಿದು ಬಂದಿದೆ.

ನೂತನ ವಂದೇ ಭಾರತ ಎಕ್ಸಪ್ರೆಸ್ ರೈಲು ಸೇವೆಯನ್ನು ಬೆಳಗಾವಿಯಿಂದ ಪ್ರಾರಂಭಿಸುವ ವಿಷಯವಾಗಿ ಅಗತ್ಯ ಅನುಮೋದನೆ ದೊರೆತಿರುವುದಕ್ಕೆ ಮೊದಲನೆಯದಾಗಿ ಮಾನ್ಯ ಪ್ರಧಾನ ಮಂತ್ರಿಗ ನರೇಂದ್ರಮೋದಿ ಅವರಿಗೆ, ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಹಾಗೂ ಕೇಂದ್ರ ರೇಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ.

Previous articleಎಟಿಎಂಗಳು ಮುಚ್ಚಿವಿಯೇ…?
Next articleIPL 2025: 18ನೇ ಆವೃತ್ತಿಯ ಉಳಿದ ಪಂದ್ಯಗಳು ಅಮಾನತು