ಬೆದರಿಕೆ ಬರುತ್ತಿರುವುದು ಗಂಭೀರ ವಿಚಾರ

0
18

ಧಾರವಾಡ: ಶಾಲಾ- ಕಾಲೇಜುಗಳಿಗೆ ಬೆದರಿಕೆ ಬರುತ್ತಿರುವುದು ಗಂಭೀರ ವಿಚಾರವಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಮೇಲ್‍ಗಳು ಎಲ್ಲಿಂದ ಯಾರಿಗೆ ಬಂದಿದೆ ಎಂಬುದನ್ನು ಪತ್ತೆ ಮಾಡಬೇಕು. ಇದೊಂದು ಭಯೋತ್ಪಾದನೆಗೆ ಸಂಬಂಧಪಟ್ಟ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಘಟನೆಗಳು ಆಗುವ ಬಗ್ಗೆ ಮೇಲ್‍ನಲ್ಲಿ ಸೂಚನೆ ಇದೆ. ಸರ್ಕಾರ ಇಂತವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಕಾಂಗ್ರೆಸ್‍ನ ತುಷ್ಟೀಕರಣ ಪರಿಣಾಮ ಮುಸ್ಲಿಮರು ನಮ್ಮದೇ ರಾಜ್ಯ ಎನ್ನುವ ಭ್ರಮೆಯಲ್ಲಿದ್ದಾರೆ, ಶಾಲಾ- ಕಾಲೇಜುಗಳಿಗೆ ಬೆದರಿಕೆ ಬರುತ್ತಿರುವುದು ಗಂಭೀರ ವಿಚಾರವಾಗಿದೆ. ಜನರು ತಮ್ಮ ಸುರಕ್ಷತೆ ಬಗ್ಗೆ ವಿಚಾರ ಮಾಡಬೇಕು. ಈ ಮೇಲ್‍ಗಳು ಎಲ್ಲಿಂದ ಯಾರಿಗೆ ಬಂದಿದೆ ಎಂಬುದನ್ನು ಸರಕಾರ ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Previous articleಮುನಿಸ್ವಾಮಿ ಭವಿಷ್ಯ: ರಾಜ್ಯ ಸರ್ಕಾರದ ಆಯುಷ್ಯ ಮೂರೇ ತಿಂಗಳು
Next articleಶ್ರೀರಂಗಪಟ್ಟಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ