ಬೆಂಗಳೂರ ಸಿಂಗಾಪುರ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದವರು ಈಗ…

0
33

ಅಭಿವೃದ್ಧಿ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದವರು ಹೇಳೋ‌ ಮಾತಾ ಇದು?

ಬೆಂಗಳೂರು: ಸ್ವತಃ ಭಗವಂತ ಧರೆಗಿಳಿದು ಬಂದರೂ ಇನ್ನೂ ಮೂರ್ನಾಲ್ಕು ವರ್ಷ ಬೆಂಗಳೂರು ಸರಿ ಮಾಡಲು ಆಗಲ್ಲ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿನ್ನೆ ದಿನ ಡಿಕೆಶಿ ಅವರು, ಬೆಂಗಳೂರು ಉಸ್ತುವಾರಿಗಳು ಒಂದು ಹೇಳಿಕೆ ಕೊಟ್ಟಿದ್ದಾರೆ. ಇನ್ನೂ ಮೂರ್ನಾಲ್ಕು ವರ್ಷವಾದ್ರೂ ಆ ಭಗವಂತ ಕೂಡಾ ಬೆಂಗಳೂರು ಉದ್ಧಾರ ಮಾಡಲು ಆಗಲ್ಲ ಅಂದಿದ್ದಾರೆ. ಅಭಿವೃದ್ಧಿ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದವರು ಹೇಳೋ‌ ಮಾತಾ ಇದು? ಇನ್ನೂ, ಒಂದು ಗುಂಡಿ ಮುಚ್ಚಲು ಇವರಿಗೆ ಯೋಗ್ಯತೆ ಇಲ್ಲ, ಅನುದಾನ ಕೊಡಲು ಆಗಲ್ಲ. ಬೆಂಗಳೂರು ಬಗ್ಗೆ ಡಿಕೆ ಶಿವಕುಮಾರ್ ಅವರ ಈ ಥರ ಹೇಳಿಕೆ ಸಹಜವಾಗಿ ಎಲ್ಲರಿಗೂ ಬೇಸರ ತರಿಸಿದೆ. ಬೆಂಗಳೂರನ್ನು ಸಿಂಗಾಪುರ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದ್ರು. ಒಂದು ಗುಂಡಿ‌ ಮುಚ್ಚಲು ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

Previous articleರಾಜಕೀಯ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆ ಜಾರಿ
Next articleಕನ್ನಡ ನೆಲದಲ್ಲಿಯೇ ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡೆಕ್ಟರ್‌ಗೆ ಥಳಿತ