ಬೆಂಗಳೂರು-ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳ ಓಡಾಟ

0
11

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಪಂಢರಪುರ ನಿಲ್ದಾಣಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಅವುಗಳ ವಿವರ ಈ ಕೆಳಗಿನಂತಿವೆ:

  1. ಎಸ್ಎಂವಿಟಿ ಬೆಂಗಳೂರು-ಪಂಢರಪುರ ನಿಲ್ದಾಣಗಳ ನಡುವೆ ವಿಷೇಶ ಎಕ್ಸ್ ಪ್ರೆಸ್ (06297/06298) ರೈಲು ಸಂಚಾರ
  • ರೈಲು ಸಂಖ್ಯೆ 06297 ಎಸ್ಎಂವಿಟಿ ಬೆಂಗಳೂರಿನಿಂದ ಜುಲೈ 1, 3, & 6, 2024 ರಂದು ರಾತ್ರಿ 22:00 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 18:20 ಗಂಟೆಗೆ ಪಂಢರಪುರ ನಿಲ್ದಾಣವನ್ನು ತಲುಪಲಿದೆ.
  • ಪುನಃ ಇದೆ ರೈಲು (06298) ಜುಲೈ 2, 4, & 7, 2024 ರಂದು ಪಂಢರಪುರದಿಂದ ರಾತ್ರಿ 20:00 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
  1. ಎಸಎಂವಿಟಿ ಬೆಂಗಳೂರು-ಪಂಢರಪುರ ನಿಲ್ದಾಣಗಳ ನಡುವೆ ವಿಷೇಶ ಎಕ್ಸ್‌ಪ್ರೆಸ್ (06295/06296) ರೈಲು ಸಂಚಾರ
  • ಜುಲೈ 2, 5, & 7, 2024 ರಂದು ರೈಲು ಸಂಖ್ಯೆ 06295 ಎಸಎಂವಿಟಿ ಬೆಂಗಳೂರಿನಿಂದ ರಾತ್ರಿ 22:00 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 18:20 ಗಂಟೆಗೆ ಪಂಢರಪುರವನ್ನು ತಲುಪುತ್ತದೆ.
  • ಪುನಃ ಇದೆ ರೈಲು (06296) ಜುಲೈ 3, 6, & 8, 2024 ರಂದು ಪಂಢರಪುರದಿಂದ ರಾತ್ರಿ 20:00 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12:30 ಗಂಟೆಗೆ ಎಸಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.

ಈ ರೈಲುಗಳ ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯ ವಿವರ ಈ ಕೆಳಗಿನಂತಿವೆ:
ನಿಲುಗಡೆಗಳು:
ಈ ಮೇಲಿನ ವಿಶೇಷ ರೈಲುಗಳು ತುಮಕೂರು, ಗುಬ್ಬಿ, ನಿಟ್ಟೂರು, ತಿಪಟೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಎಸ್‌ಎಂಎಂ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ ರೋಡ, ಘಟಪ್ರಭಾ, ರಾಯಬಾಗ, ಚಿಂಚಲಿ, ಉಗರ್ ಖುರ್ದ್, ಮೀರಜ್, ಕವಠೆ-ಮಹಂಕಲ್, ಧಲಗಾಂವ್, & ಸಂಗೋಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ಬೋಗಿಗಳ ಸಂಯೋಜನೆ:

ರೈಲು ಸಂಖ್ಯೆ 06297/06298 ಎಸಿ ಫಸ್ಟ್ ಕ್ಲಾಸ್-1, ಎಸಿ ಟು ಟೈಯರ್-2, ಎಸಿ ತ್ರೀ ಟೈಯರ್-2, ಸ್ಲೀಪರ್ ಕ್ಲಾಸ್-6, ಜನರಲ್ ಸೆಕೆಂಡ್ ಕ್ಲಾಸ್-7, ಮತ್ತು ಎಸ್‌ಎಲ್‌ಆರ್/ಡಿ-2 ಸೇರಿದಂತೆ ಒಟ್ಟು 20 ಬೋಗಿಗಳು ಒಳಗೊಂಡಿರುತ್ತದೆ.

ರೈಲು ಸಂಖ್ಯೆ 06295/06296 ಎಸಿ ಟು ಟೈಯರ್-1, ಎಸಿ ತ್ರೀ ಟೈಯರ್-1, ಸ್ಲೀಪರ್ ಕ್ಲಾಸ್-12, ಜನರಲ್ ಸೆಕೆಂಡ್ ಕ್ಲಾಸ್-4, ಮತ್ತು ಎಸ್‌ಎಲ್‌ಆರ್/ಡಿ-2 ಸೇರಿದಂತೆ ಒಟ್ಟು 20 ಬೋಗಿಗಳು ಒಳಗೊಂಡಿರುತ್ತದೆ.

ಮುಂಗಡ ಬುಕಿಂಗ್ ಮತ್ತು ವೇಳಾಪಟ್ಟಿ ಸೇರಿದಂತೆ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಹಾಯವಾಣಿ 139 ಗೆ ಸಂಪರ್ಕಿಸಿ ಅಥವಾ ಅಧಿಕೃತ ವೆಬ್‌ಸೈಟ್‌ www.enquiry.indianrail.gov.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು

Previous articleಸಿದ್ದರಾಮಯ್ಯರನ್ನ ಬೇಟಿಯಾದ ಐರೆನ್ ಲೇಡಿ ಆಪ್ ಇಂಡಿಯಾ
Next articleಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ