ಬುಡಾ ಹಗರಣ ಖಂಡಿಸಿ ಬಿಜೆಪಿ ಪ್ರತಿಭಟನೆ

0
4

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ‌ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಹಗರಣ ಖಂಡಿಸಿ ಬಿಜೆಪಿ‌ ವತಿಯಿಂದ ಪ್ರತಿಭಟನೆ ಮಂಗಳವಾರ ನಡೆಸಲಾಯಿತು.
ರಾಜ್ಯದ ‌ಉಪ‌ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ಜೆ.ಎಸ್.ಆಂಜನೇಯಲು ಬುಡಾ ಅಧ್ಯಕ್ಷರಾದಾಗಿಂದ ಹಲವು ಭ್ರಷ್ಟಾಚಾರ ನಡೆಸಿದ್ದಾರೆ. ಪತ್ನಿ ಹೆಸರಲ್ಲಿ ಸೈಟು ಹಂಚಿಕೆ, ಬಿಲ್ಡರ್ ಗಳಿಂದ ಲಂಚ ಪಡೆದು ಕಾ‌ನೂನು ಬಾಹಿರವಾಗಿ ನಿವೇಶನ ಮಂಜೂರಾತಿ ನೀಡಿದ್ದಾರೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಶಾಸಕರಾದ ನಾರಾ ಭರತರೆಡ್ಡಿ, ಜೆ.ಎನ್.ಗಣೇಶ ದೂರು ನೀಡಿದ್ದಾರೆ. ಅಲ್ಲದೇ ಬುಡಾ ಸದಸ್ಯರು ಕೂಡ ಹಗರಣದ ಕುರಿತು ದೂರು ಸಲ್ಲಿಸಿದ್ದಾರೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ‌ಅದೇ ಪಕ್ಷದವರೇ ಅಕ್ರಮ ಆಗಿದೆ ಎಂದು ದೂರು ಸಲ್ಲಿಸಿದಾಗಲೂ ಅಧ್ಯಕ್ಷ ಜೆ.ಎಸ್.ಆಂಜನೇಯ ರಾಜೀನಾಮೆ ನೀಡಿಲ್ಲ ಎಂದು ಅಪಹಾಸ್ಯ ಮಾಡಿದ ಬಿಜೆಪಿ ಮುಖಂಡರು, ಬುಡಾದಲ್ಲಿ ನಡೆದ ಅಕ್ರಮ ಸಮಗ್ರ ತನಿಖೆ ನಡೆಸಬೇಕು. ಅಕ್ರಮ‌ ಎಸಗಿದವರ ವಿರುದ್ದ‌ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Previous articleಸರ್ಕಾರಕ್ಕೆ ರಾಜ್ಯದ ಯಾವೊಂದು ಸಮಸ್ಯೆಗಳು ಕೇಳಿಸುತ್ತಿಲ್ಲ…
Next articleಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣ ಜನತೆ ತಿರಸ್ಕರಿಸಿದ್ದಾರೆ