ಬೀಗ ಮುರಿದು ಹಣ, ಒಡವೆ ಕದ್ದು ಖದೀಮರು ಪರಾರಿ

0
17

ಮಂಡ್ಯ: ಮನೆ ಬಾಗಿಲ‌ಇನ ಬೀಗ ಮುರಿದು 2 ಲಕ್ಷ ರೂ. ಮೌಲ್ಯದ ಹಣ ಒಡವೆ ಕದ್ದು ಪರಾರಿಯಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಬೂದನೂರಿನ ಮಂಗಯ್ಯನಗರ ಬಡಾವಣೆಯಲ್ಲಿ‌ ಜರುಗಿದೆ.
ಗ್ರಾಮದ ಸಿದ್ದಮ್ಮ ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಕಳ್ಳರು ಕಪಾಟಿನಲ್ಲಿ ಇಟ್ಟಿದ್ದ ₹1.20 ನಗದು ಹಾಗೂ 10 ಗ್ರಾಂ ತೂಕದ ಕಿವಿಯೋಲೆ ಸೇರಿದಂತೆ ಹಲವು ಸಾಮಾಗ್ರಿಗಳನ್ನು ಕದ್ದೊಯ್ದಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ಸಿದ್ದಮ್ಮ ಅವರು ಕಾರ್ಯನಿಮಿತ್ತ ನೆಂಟರ ಮನೆಗೆ ಹೊರ ಹೋಗಿದ್ದ ವೇಳೆ ಘಟನೆ ಜರುಗಿದ್ದು, ಬೆಳಿಗ್ಗೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ‌.
ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಭಾನುವಾರ ಮಹಜರು ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

Previous articleಸಾಲಬಾಧೆ: ರೈತ ಆತ್ಮಹತ್ಯೆ
Next articleನಾಯಿ ಹೊತ್ತೊಯ್ದು ತಿಂದು ಹಾಕಿದ ಚಿರತೆ