ಕಳೆದ ವರ್ಷಕ್ಕಿಂತ ಈ ವರ್ಷ ಇನ್ನು ಭೀಕರಕತೆ
ಯಾದಗಿರಿ: ನಮ್ಮಲ್ಲಿ ಭವಿಷ್ಯವನ್ನು ಎರಡು ಭಾಗವಾಗಿ ವಿಂಗಡ ಮಾಡುತ್ತಾರೆ. ಒಂದು ಸಂಕ್ರಾಂತಿ ಭವಿಷ್ಯ ಇನ್ನೊಂದು ಯುಗಾದಿ ಭವಿಷ್ಯ ಅಂತ. ಸಂಕ್ರಾಂತಿ ಭವಿಷ್ಯ ರಾಜರುಗಳಿಗೆ ಮಹಾರಾಜರುಗಳಿಗೆ ದೊಡ್ಡ ವ್ಯಾಪಾರಸ್ಥರಿಗೆ ಸಂಕ್ರಾಂತಿ ಭವಿಷ್ಯ ಇರುತ್ತೆ ಎಂದು ಕೋಡಿಹಳ್ಳಿ ಶ್ರೀಗಳು ಹೇಳಿದ್ದಾರೆ.
ನಗರದಲ್ಲ ಮಾತನಾಡಿರುವ ಅವರು ಯುಗಾದಿ ಇನ್ನು ಒಂದು ತಿಂಗಳು ದೂರವಿದೆ. ಅದರ ಮೇಲೆ ಹೇಳುವುದು ಸ್ವಲ್ಪ ಕಷ್ಟವಾದರೂ. ಬರುವಂತ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ. ಮಳೆ ಬೆಳೆ ಚೆನ್ನಾಗಿಯಿದೆ ಸುಭಿಕ್ಷಿತೆ ಇರುತ್ತೆ ಯಾವುದೇ ತೊಂದರೆಗಳು ಕಾಣುತ್ತಿಲ್ಲ ಆದರೆ ಯುಗಾದಿಯ ಬಳಿಕ ಮತ್ತೆ ಜಾಗತಿಕ ಬಗ್ಗೆ ಬಹಳ ಅಜಾಗುರಕತೆಯಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಇನ್ನು ಭೀಕರಕತೆ ಕಾಡುವ ಲಕ್ಷಣಗಳಿದ್ದು. ಭೂಕಂಪನ ಸಾವು ನೋವು ಸಂಭವಿಸೋದು, ಕಟ್ಟಡಗಳು ನೆಲಕುರುಳೋದು ಮುಂದುವರೆಯುತ್ತೆ. ಭೂ ಸುನಾಮಿ,ಜಲ ಸುನಾಮಿ,ಭಾಹ್ಯ ಸುನಾಮಿ ಅಂತ ಹೇಳುತ್ತಿವೆ. ಇಲ್ಲಿವರೆಗೆ ಬರಿ ಜಲ ಸುನಾಮಿ ಆಗುತ್ತಿತ್ತು. ಈ ಬಾರಿ ಭುಸುನಾಮಿ ಜೊತೆಗೆ ಭಾಹ್ಯಕಾಶದಲ್ಲೂ ಸುನಾಮಿ ಆಗುತ್ತೆ. ಅದನ್ನ ಯುಗಾದಿ ನಂತರ ಹೇಳುತ್ತೇನೆ
ರಾಜಕೀಯ ಸಂಚಲನ: ಇನ್ನು ರಾಜಕೀಯ ಕುರಿತಂತೆ ಮಾತನಾಡಿ ಎಲ್ಲಾ ಸಮುದಾಯದ ಎಲ್ಲಾ ಜಾತಿ ಎಲ್ಲಾ ವರ್ಗದವರು ಈ ಭೂಮಿ ಮೇಲೆ ವಾಸವಿದ್ದಾರೆ. ಪ್ರಾಚೀನ ಕಾಲದಿಂದಲೂ ಹಾಲಮತ ಸಮಾಜ ಅಂತ ಆಂದ್ರೆ ಅಡವಿಯಲ್ಲಿದ್ದು ಕುರಿಗಳನ್ನ ಸಾಕೋದು ಮಾಡ್ತಾರೆ. ಕುರಿಯ ಇಕ್ಕಿಯಲ್ಲಿ ಲಿಂಗವನ್ನ ಕಂಡವರು. ಪ್ರಕೃತಿ ಮೇಲೆ ಗಾಳಿಯ ಮೇಲೆ ಭೂಮಿಯ ಮೇಲೆ ಅವರು ಅಡವಿಯಲ್ಲಿ ಇದ್ದು ಕಂಡದ್ದು ನೋಡಿದ್ದ ಅನುಭವಸಿದ್ದನ್ನ ಹೇಳುತ್ತಾ ಬಂದಿದ್ದಾರೆ ಅದು ಕುರುವಿನ ರಟ್ಟು. ಹಾಲು ಕೆಟ್ಟರು ಹಾಲಮತ ಸಮಾಜ ಕೆಡುವುದಿಲ್ಲ ಅಂತ ಹೇಳುತ್ತಾರೆ. ಇವತ್ತು ಹಾಲಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಅವರಾಗೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗುತ್ತೆ ಎಂದು ಯುಗಾದಿ ಮೇಲೆ ಹೇಳುತ್ತೇನೆ ಎಂದಿದ್ದಾರೆ.