ಬಿಜೆಪಿ ಹಿಂದುತ್ವದ ಹೆಸರಲ್ಲಿ ಹಣ ಮಾಡುತ್ತಿದೆ

0
11

ಕೊಪ್ಪಳ: ಬಿಜೆಪಿಯವರು ಹಿಂದುತ್ವದ ಹೆಸರಲ್ಲಿ ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಹೆಸರಲ್ಲಿ ಮಾತನಾಡುವುದರಿಂದ ಯಾರಿಗೆ ಲಾಭ ಆಗಿದೆ. ಹಿಂದುತ್ವದ ಹೆಸರಿನಿಂದ ಬಿಜೆಪಿ ನಾಯಕರಿಗೆ ಮಾತ್ರ ಲಾಭವಾಗಿದೆ. ಜನರಿಗೆ ಯಾವುದೇ ಲಾಭವಾಗಿಲ್ಲ ಎಂದರು.
ಕಾಂಗ್ರೆಸ್ ಶಾಸಕರ ದುಬೈ ಪ್ರವಾಸ ಬಗ್ಗೆ ಮಾಹಿತಿ ಇಲ್ಲ. ಯಾರು ದುಬೈ ಪ್ರವಾಸ ಹೋಗುತ್ತಿಲ್ಲ. ಹೋದರೂ ತಪ್ಪೇನು ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ‌75 ವರ್ಷವಾಗಿದೆ. ಹೀಗಾಗಿ ನಿತೀನ್ ಗಡ್ಕರಿ ಪ್ರಧಾನಮಂತ್ರಿ ಆಗುತ್ತಾರೆ ಎಂದು ಬಿಜೆಪಿಯಲ್ಲಿ ಮಾತುಕತೆ ನಡೆಯುತ್ತಿದೆ. ಈ ಹಿನ್ನಲೆ ಬಿಜೆಪಿಯಲ್ಲಿ ಕೂಡಾ ಜಟಾಪಟಿ ಇದೆ. ಬಿಜೆಪಿಯವರಿಗೆ ಚಾನ್ಸ್ ಸಿಕ್ಕಿದೆ ಮಾತನಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ನಮ್ಮ ಪಾರ್ಟಿ ವಿಚಾರ ಯಾಕೆ ಬೇಕು?. ರಾಜಕೀಯದಲ್ಲಿ ಭಿನ್ನಾಭಿಪ್ರಾಯ ಇರಲೇಬೇಕು ಎಂದು ಪ್ರಹ್ಲಾದ್ ಜೋಶಿಯವರ ಕಾಂಗ್ರೆಸ್ಸಿನವರು ಬಾಯಿ ಮುಚ್ಚುತ್ತಿಲ್ಲ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.

Previous articleಬ್ಯಾಂಕ್ ದರೋಡೆ ತನಿಖೆ ಚುರುಕು; ಎಸೆದಿದ್ದ ಮೊಬೈಲ್ ಪತ್ತೆ
Next articleಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ಸಂಕ ವರದಿ