ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ 34 ಸಚಿವರು, 28 ಮಹಿಳೆಯರು ಮತ್ತು ಇಬ್ಬರು ಮಾಜಿ ಮುಖ್ಯಮಂತ್ರಿಗಳು, 27ಎಸ್‌ಸಿ, 18 ಎಸ್‌ಟಿ, 57 ಒಬಿಸಿ ಒಳಗೊಂಡಂತೆ ಒಟ್ಟು 195 ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಘೋಷಿಸಲಾಗಿದೆ. ಇದರಲ್ಲಿ 47 ಜನ ಯುವ ಅಭ್ಯರ್ಥಿಗಳಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ, ಗೃಹ ಸಚಿವ ಅಮಿತ್ ಶಾ ಗಾಂಧಿನಗರದಿಂದ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶದಿಂದ 51, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 21, ರಾಜಸ್ಥಾನ 15, ಗುಜರಾತ್ 15, ಕೇರಳ 12, ಜಾರ್ಖಂಡ್ 11, ಛತೀಸ್‌ಗಡ 11, ಗೋವಾ 1, ದೆಹಲಿ 5, ಜಮ್ಮು ಕಾಶ್ಮೀರ 2, ಉತ್ತರಾಖಂಡ 3, ಅರುಣಾಚಲ ಪ್ರದೇಶ 1, ತ್ರಿಪುರ 1, ಅಂಡಮಾನ್ 1 ಸೇರಿದಂತೆ 16 ರಾಜ್ಯ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಲಾಗಿದೆ.