ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ

0
13

ಯಾದಗಿರಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಕಲಬುರಗಿಯಲ್ಲಿ ಶಹಾಪುರ ಪೊಲೀಸರು  ಬಂಧಿಸಿದ್ದಾರೆ. ಮಣಿಕಂಠ ರಾಠೋಡ ಸಹೋದರ ರಾಜು ರಾಠೋಡಗೆ ಸೇರಿದ ಗುರುಮಠಕಲ್ ಪಟ್ಟಣದ ಹೊರಭಾಗದ ಶ್ರೀಲಕ್ಷ್ಮಿ ತಿಮ್ಮಪ್ಪ ರೈಸ್ ಮಿಲ್ ಮೇಲೆ ಶಹಾಪುರ ಪೊಲೀಸರು ದಾಳಿ ಮಾಡಿ 700 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದರು. ನವೆಂಬರ್ ತಿಂಗಳು ಪ್ರಕರಣ ದಾಖಲಿಸಿಕೊಂಡು ಅಕ್ಕಿ ನಾಪತ್ತೆ ಬಗ್ಗೆ ತನಿಖೆಯಲ್ಲಿದ್ದ ಶಹಾಪುರ ಪೊಲೀಸರು‌ ಮಣಿಕಠ ರಾಠೋಡನನ್ನು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. ವಿಚಾರಣೆಗೆ ಹಾಜರಾಗದೆ ಇದ್ದ ಮಣಿಕಂಠನನ್ನು‌ ಇಂದು ಕಲಬುರಗಿಯಲ್ಲಿ ಬಂಧಿಸಿದ್ದಾರೆ.

Previous articleಗಿರಿ ಪ್ರದೇಶಕ್ಕೆ ಜುಲೈ ೨೨ ರವರೆಗೆ ವಾಹನಗಳ ಸಂಚಾರ ನಿಷೇಧ
Next articleರಾಜ್ಯದ ಪ್ರಪ್ರಥಮ ಡಬಲ್ ಡೆಕ್ಕರ್ ಫ್ಲೈ ಓವರ್ ಇಂದಿನಿಂದ ಸೇವೆಗೆ