ಶಿಗ್ಗಾವಿ: ಕಾಂಗ್ರೆಸ್ ಸರಕಾರ ನುಡಿದಂತೆ ನಡೆದ ಸರಕಾರವಾಗಿದ್ದು ಈ ಉಪಚುನಾವಣೆಯಲ್ಲಿ ಬಿಜೆಪಿಯವರಿಗೆ ಸುಳ್ಳು ಅಪಪ್ರಚಾರ ಬಿಟ್ಟು ಬೇರೆನು ಅಸ್ತ್ರ ಇಲ್ಲ ಎಂದು ಕಾನೂನು ಎಚ್.ಕೆ. ಪಾಟೀಲ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯು ಇನ್ನು ಮೂರೇ ದಿನ ಉಳಿದಿದ್ದು ಕಾಂಗ್ರೆಸ್ ಅಲೆ ಹೆಚ್ಚಾಗಿದೆ. ಬಿಜೆಪಿಯವರು ಧರ್ಮ, ಧರ್ಮಗಳ ನಡುವೆ ಬೆಂಕಿ ಹೊತ್ತಿಸುವ ಕಾರ್ಯ ಮಾಡುತ್ತ ಮೋದಿ, ಅಮಿತ್ ಶಾ ವರೆಗೂ ಅದು ವ್ಯಾಪಿಸಿದೆ. ಕೊರೊನಾ ವಿಚಾರದಲ್ಲಿ ನ್ಯಾಯಾಂಗ ವರದಿಯ ಆಧಾರ ಮೇಲೆ ಕ್ರಮ ಆಗುತ್ತದೆ ಎಂದು ಬಿಜೆಪಿಯವರು ಭಯಭೀತರಾಗಿದ್ದಾರೆ. ಸಂಡೂರಿನಲ್ಲಿಯೂ ಸುಳ್ಳು ಪ್ರಚಾರಕ್ಕೆ ಜನತೆ ತಕ್ಕ ಉತ್ತರ ಕೊಡುತ್ತಿದ್ದಾರೆ. ಜನತೆ ಜಾಗೃತರಾಗಿದ್ದಾರೆ ಎಂದರು.
ಕಾಂಗ್ರೆಸ್‌ನವರು ಜಾತ್ರೆ ಮಾಡಲು ಶಿಗ್ಗಾವಿಗೆ ಬಂದಿದ್ದಾರೆ ಎಂಬ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಸಿಟಿ ರವಿ, ಯತ್ನಾಳ, ಕಾರಜೋಳ ನೂರಾರು ಮುಖಂಡರೂ ಶಿಗ್ಗಾವಿಗೆ ಬಂದಿದ್ದಾರೆ ಮತ್ತೆ ಅವರು ಏತಕ್ಕೆ ಬಂದಿದ್ದಾರೆ? ಎಂದು ಪ್ರಶ್ನಿಸಿದ ಅವರು, ಹಣ ಹಂಚಲು ಬಂದಿದ್ದಾರೆ ಎಂಬ ಬೊಮ್ಮಾಯಿಯವರ ಆರೋಪಕ್ಕೆ ತಿರುಗೇಟು ನೀಡಿದರು.




















