Home Advertisement
Home ನಮ್ಮ ಜಿಲ್ಲೆ ಕಲಬುರಗಿ ಬಿಜೆಪಿ ಬಟನ್ ಎಕೆ 47 ಇದ್ದಂತೆ; ಅದನ್ನು ಒತ್ತಿದರೆ ಹಿಂದೂಗಳು ಸುರಕ್ಷಿತ

ಬಿಜೆಪಿ ಬಟನ್ ಎಕೆ 47 ಇದ್ದಂತೆ; ಅದನ್ನು ಒತ್ತಿದರೆ ಹಿಂದೂಗಳು ಸುರಕ್ಷಿತ

0
129

ಕಲಬುರಗಿ: ಮತಯಂತ್ರದಲ್ಲಿ ಬಿಜೆಪಿ ಬಟನ್ ಒತ್ತಿದರೆ ಅದೇ ನಿಮಗೆ ಎಕೆ 47 ಇದ್ದ ಹಾಗೆ, ಒಂದು ವೇಳೆ ಮತದಾನ ಮಾಡಲಿಲ್ಲ ಅಂದರೆ ನಾವು ಹಿಂದುಗಳು ಸುರಕ್ಷಿತರಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಹಾಗೂ ಎಸ್‌ಡಿಪಿಐ ಸೇರಿ ೨೦೪೭ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವುದಕ್ಕೆ ಪಣ ತೊಟ್ಟಿದ್ದಾರೆ. ಹುನ್ನಾರದ ಕೆಲವು ಪ್ರಕರಣಗಳಷ್ಟೇ ಹೊರ ಬರುತ್ತಿವೆ. ಇನ್ನೂ ಸಾಕಷ್ಟು ಪ್ರಕರಣಗಳು ಹೊರ ಬರುತ್ತಿಲ್ಲ. ಆದರಿಂದ ಭಾರತ ಹಿಂದೂ ರಾಷ್ಟ್ರವಾಗಬೇಕಾದರೆ ಹಿಂದುಗಳು ಸುರಕ್ಷಿತವಾಗಿರಬೇಕು ಎಂದರೆ ನೀವು ಮೋದಿಗೆ ಮತ ಹಾಕಿ ಎಂದು ಮನವಿ ಮಾಡಿದರು.
ನನ್ನ ವಿಜಯಪುರ ಕ್ಷೇತ್ರದಲ್ಲೂ ಸಹ ಮುಸ್ಲಿಂರು ಅತಿ ಹೆಚ್ಚಾಗಿ ಇದ್ದಾರೆ. ಬಿಜಾಪುರದಲ್ಲಿ ಒಂದಾದರೂ ಹಿಂದು ಹೆಣ್ಣು ಮಕ್ಕಳಿಗೆ ಕೆಣಕಿರುವ ಘಟನೆ ಆಗಿದೆಯಾ. ಈ ಹಿಂದೇ ತರಕಾರಿ ತರಲು ಹೋದ ನಮ್ಮ ಹೆಣ್ಣುಮಕ್ಕಳಿಗೆ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದರು. ಮೊದಲು ತರಕಾರಿ ತರಲು ಹೋದರೆ, ‘ಎ ಮಾಲ್ ಬಹುತ್ ಅಚ್ಚಾ ಹೈ’ ಎಂದು ಇನ್ ಡೈರೆಕ್ಟ್ ಆಗಿ ಹೇಳುತ್ತಿದ್ದರು. ಇಷ್ಟೆಲ್ಲಾ ಅಪಮಾನ ಅಲ್ಲಿ ಮುಸ್ಲಿಂರ ಪ್ರಭಾವ ಇತ್ತು ಎಂದು ಸಹಿಸಿಕೊಳ್ಳುತ್ತಿದ್ದರು. ಆದರೆ, ಇವಾಗ ನಮ್ಮ ಜನರು ಕೂಡ ತುಂಬಾ ಜಾಣರಾಗಿದ್ದಾರೆ. ಕುಂಕುಮ ಹಚ್ಚಿಕೊಂಡಿರುವ ಅಂಗಡಿಗೆ ಹೋಗಿ ಖರೀದಿಸುತ್ತಿದ್ದಾರೆ ಎಂದು ವಿವರಿಸಿದರು.