ದಾವಣಗೆರೆ: ಬಿಜೆಪಿಯಲ್ಲಿ ಕೆಲಸ ಮಾಡೋಕೆ ಸಮರ್ಥ ನಾಯಕತ್ವ ಇಲ್ಲ, ಬಿಜೆಪಿಯಲ್ಲಿ ಹೊಸ ಕೂಸು ಹುಟ್ಟುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯ ರಾಜ್ಯಾಧ್ಯಕ್ಷ ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ ಒಂದು ಸಾವಿರ ಜನರು ಸೇರುವುದಿಲ್ಲ. ಇದು ಸಮರ್ಥ ರಾಜ್ಯಾಧ್ಯಕ್ಷನಿಲ್ಲ ಎಂಬುದನ್ನು ತೋರಿಸುತ್ತದೆ. ಆದ್ದರಿಂದ ಶೀಘ್ರದಲ್ಲಿಯೇ ಬಿಜೆಪಿಯಲ್ಲಿ ಹೊಸ ಕೂಸು ಹುಟ್ಟುತ್ತದೆ ಎಂದರು.
ಡಿ.ಕೆ. ಶಿವಕುಮಾರ್ ಜೊತೆಗೆ ಕರ್ನಾಟಕದಲ್ಲಿ ಸರ್ಕಾರ ಮಾಡಲಿಕ್ಕೆ ಒಪ್ಪಂದ ಆಗಿದೆ. ಡಿಕೆಶಿ ಮುಖ್ಯಮಂತ್ರಿ, ವಿಜಯೇಂದ್ರ ಉಪಮುಖ್ಯಮಂತ್ರಿ ಎನ್ನುವ ಒಪ್ಪಂದ ಮಾಡಿಕೊಂಡಾಗಿದೆ ಎನ್ನುವ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದರು.
ನಾನು ಹೊಸದಾಗಿ ಏನಾದರೂ ಮಾಡ್ತಿನಿ ಹೊರತು ಕಾಂಗ್ರೆಸ್‌ಗೆ ಮಾತ್ರ ಹೋಗಲ್ಲ. ಬಿ.ವೈ. ರಾಘವೇಂದ್ರ ಯಡಿಯೂರಪ್ಪಗೆ ಶಾಮನೂರು ಶಿವಶಂಕರಪ್ಪ ಆಶೀರ್ವಾದ ಇದೆ, ರೇಣುಕಾಚಾರ್ಯ ಅಪ್ಪ, ಮಗನಿಗೆ ಹೆದರಿಸುತ್ತಾನೆ. ಈಶ್ವರಪ್ಪಗೂ ಹೆದರಿಸೋಕೆ ಹೇಳ್ತಾರೆ, ವಿಜಯೇಂದ್ರೆ ಕೂಡ ಸಿಡಿ ಕಂಪನಿ ಮಾಲೀಕ, ಡಿಕೆ ಶಿವಕುಮಾರ್ ಕೂಡ ಅದೆ ಮಾಡ್ತಾರೆ, ವಿಜಯೇಂದ್ರ ಸಿಡಿ ಕೂಡ ಅಧಿಕಾರಿಗಳಿಂದ ಡಿಲಿಟ್ ಆಗಿ ಕೇಸ್ ಕ್ಲೋಸ್ ಆಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನವರು ಭ್ರಷ್ಟಾಚಾರ ಬಿಟ್ರೆ ಅವರೇನು ಮಾಡಿಲ್ಲ. ಅವರ ಸಾಧನೆ ಅಂದ್ರೆ ಪಂಚ ಗ್ಯಾರಂಟಿ ಮಾತ್ರ. ಆದರೆ, ಈಗ ಅದ್ಯಾವ ಸಾಧನೆ ಮಾಡಿದ್ದಾರೆಂಬಂತೆ ಸಾಧನ ಸಮಾವೇಶ ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.