ಹುಬ್ಬಳ್ಳಿ: ವಿಜಯನಗರದಲ್ಲಿ ದುರುಳನಿಂದ ಕೊಲೆಯಾದ ಬಾಲಕಿಯ ಮರಣೋತ್ತರ ಪರೀಕ್ಷೆ ಮುಗಿಸಿ ಬಾಲಕಿಯ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಹುಬ್ಬಳ್ಳಿಯ ಕೆಎಂಸಿಯ ಶವಾಗಾರದಲ್ಲಿ ತಾಲೂಕಾ ದಂಡಾಧಿಕಾರಿ ಆರ್.ಕೆ.ಪಾಟೀಲ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಮೃತದೇಹವನ್ನ ಆ್ಯಂಬುಲೆನ್ಸ್‌ನಲ್ಲಿ ಮೆರವಣಿಗೆ ಮುಖಾಂತರ ಮನೆಗೆ ತೆಗೆದುಕೊಂಡು ಹೋಗಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಐದು ನಿಮಿಷಗಳ ಕಾಲ ಮನೆಯ ಮುಂದೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇವಾಂಗಪೇಟೆ ರುದ್ರಭೂಮಿಯಲ್ಲಿ ಕುರುಬ ಸಮುದಾಯದ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.